ಶಬರಿಮಲೆ: ಸನ್ನಿಧಿಯಲ್ಲಿ ಐವರು ಪೋಲೀಸರಿಗೆ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ. ಬಳಿಕ ಅವರ ಮನೆಗಳಿಗೆ ವಾಪಸ್ ಕಳುಹಿಸಲಾಯಿತು.
ಇವರೊಂದಿಗೆ ಕ್ಯಾಂಪ್ ನಲ್ಲಿ ಉಳಿದುಕೊಂಡಿದ್ದ 12 ಮಂದಿ ಪೋಲೀಸರನ್ನು ಆರೋಗ್ಯ ಇಲಾಖೆ ನಿಗಾದಲ್ಲಿರಿಸಿ ವೈದ್ಯಕೀಯ ನೆರವು ನೀಡಿದೆ.
ರೋಗ ಹರಡುವುದನ್ನು ತಡೆಗಟ್ಟುವ ಭಾಗವಾಗಿ ಸನ್ನಿಧಿಯಲ್ಲಿರುವ ಎಲ್ಲಾ ಪೋಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಸನ್ನಿಧಾನಂ ವಿಶೇಷ ಅಧಿಕಾರಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪೋಲೀಸ್ ಕ್ಯಾಂಪ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸೋಂಕುರಹಿತಗೊಳಿಸಲಾಯಿತು.
ಶಬರಿಮಲೆ ಸನ್ನಿಧಿಯ ಕರ್ತವ್ಯದಲ್ಲಿದ್ದ ಐವರು ಪೋಲೀಸರಿಗೆ ಚಿಕನ್ ಗುನ್ಯಾ ದೃಢ: 12 ಮಂದಿ ನಿಗಾದಲ್ಲಿ: ಮಾಸ್ಕ್ ಕಡ್ಡಾಯ
0
ನವೆಂಬರ್ 24, 2022