ಬೆಂಗಳೂರು; ಭಾರತದ ಮೊದಲ ಬೇಹುಗಾರಿಕಾ ಉಪಗ್ರಹ ಸಮುದ್ರದಲ್ಲಿ ಇಳಿಯಿತು. 2009ರಲ್ಲಿ ಅಂದರೆ 13 ವರ್ಷಗಳ ಹಿಂದೆ ಆರ್.ಐ.ಸಾಟ್ -2 ಎಂಬ ಬೇಹುಗಾರಿಕಾ ಉಪಗ್ರಹ ಹಿಂದೂ ಮಹಾಸಾಗರಕ್ಕೆ ಬಿದ್ದಿದೆ. .
ದೇಶವನ್ನೇ ಬೆಚ್ಚಿಬೀಳಿಸಿದ ಮುಂಬೈ ಭಯೋತ್ಪಾದನಾ ದಾಳಿಯ ನಂತರ ದೇಶದ ಮೊದಲ ‘ಐ ಇನ್ ದಿ ಸ್ಕೈ’ ಗೂಢಚಾರಿಕೆ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.
ಕೇವಲ ನಾಲ್ಕು ವರ್ಷಗಳ ಕಾಲ ಕಾರ್ಯಾಚರಣಾ ಇಂಧನದೊಂದಿಗೆ ಉಡಾವಣೆಗೊಂಡ ಈ ಉಪಗ್ರಹವು ಭಾರತದ ಭದ್ರತೆಗಾಗಿ 9 ವರ್ಷಗಳಿಂದ ಕಾರ್ಯಾಚರಣೆಯನ್ನು ಮುಂದುವರೆಸಿತು.ಉಪಗ್ರಹವು 13 ವರ್ಷಗಳ ಅವಧಿಯಲ್ಲಿ ದೇಶಕ್ಕೆ ಗಡಿ ನುಸುಳುವಿಕೆ, ಭಯೋತ್ಪಾದಕ ಚಟುವಟಿಕೆಗಳು ಮತ್ತು ಕಡಲ ಚಲನವಲನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಒದಗಿಸಿದೆ.
ಈ ಪತ್ತೇದಾರಿ ಉಪಗ್ರಹವು ಭಾರತಕ್ಕೆ ಎರಡು ಸರ್ಜಿಕಲ್ ಸ್ಟ್ರೈಕ್‍ಗಳನ್ನು ನಡೆಸಲು ಸಹಾಯ ಮಾಡಿತು. 2016 ರ ಸರ್ಜಿಕಲ್ ಸ್ಟ್ರೈಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಲಾಂಚ್‍ಪ್ಯಾಡ್‍ಗಳ ಮೇಲೆ ವೈಮಾನಿಕ ದಾಳಿ ಮತ್ತು ಫೆಬ್ರವರಿ 2019 ರ ಬಾಲಾಕೋಟ್‍ನಲ್ಲಿ ಸರ್ಜಿಕಲ್ ಸ್ಟ್ರೈಕ್ ಗೆ ನೆರವಾಗಿತ್ತು.
ಸೆಪ್ಟೆಂಬರ್ 2, 2009 ರಂದು ಆಂಧ್ರಪ್ರದೇಶದ ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಮತ್ತು ಇತರ ಪ್ರಯಾಣಿಕರ ಜೀವವನ್ನು ಬಲಿತೆಗೆದುಕೊಂಡ ಹೆಲಿಕಾಪ್ಟರ್ ಅಪಘಾತದಲ್ಲಿ ಉಪಗ್ರಹವನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾಯಿತು.
ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಇಸ್ರೋ ಉಪಗ್ರಹವನ್ನು ಮತ್ತೆ ಭೂಮಿಯ ಮೇಲ್ಮೈಗೆ ತಂದಿದೆ. ಉಪಗ್ರಹವು ಭೂಮಿಯ ಮೇಲ್ಮೈಯನ್ನು ಪ್ರವೇಶಿಸಿ ವಾತಾವರಣದ ಗಾಳಿಯೊಂದಿಗೆ ಘರ್ಷಣೆಗೊಂಡು ಉರಿದು ನಂತರ ಸಾಗರಕ್ಕೆ ಬಿದ್ದಿತು.
ಸರ್ಜಿಕಲ್ ಸ್ಟ್ರೈಕ್ ನ ಗೂಢಚಾರ ಮರಳಿ ಭೂಮಿಗೆ: 13 ವರ್ಷಗಳ ಬಳಿಕ ಭೂಮಿಗೆ ಮರಳಿದ ಭಾರತದ ಮೊದಲ ಗೂಢಚಾರಿಕೆ ಉಪಗ್ರಹ
0
ನವೆಂಬರ್ 05, 2022