ದುಂಬ್ರಿಗುಡಾ:ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು(Alluri Sitaramaraju) ಜಿಲ್ಲೆಯ ದುಂಬ್ರಿಗುಡಾದಲ್ಲಿ ರವಿವಾರ ಕಳ್ಳಸಾಗಣೆ ಜಾಲದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 130 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
2021ರ ತೆಲುಗು ಚಿತ್ರ 'ಪುಷ್ಪಾ:ದಿ ರೈಸ್ '(Pushpa: The Rise)ನಿಂದ ಸ್ಫೂರ್ತಿ ಪಡೆದಿದ್ದ ಆರೋಪಿಗಳು ಗಾಂಜಾವನ್ನು ಬೊಲೆರೊ ವಾಹನದ ಛಾವಣಿಯ ಅಡಿ ನಿರ್ಮಿಸಲಾಗಿದ್ದ ವಿಶೇಷ ಸೆಲ್ಫ್ ನಲ್ಲಿ ಬಚ್ಚಿಟ್ಟಿದ್ದರು.
ಕೋರಾಪತ್ನ ಪಾಂಗಿ ಮಹೇಶ್ವರ ಮತ್ತು ದುಂಬ್ರಿಗುಡಾದ ರಮೇಶ (Ramesh)ಬಂಧಿತ ಆರೋಪಿಗಳು. ಅವರು ರಾಜ್ಯದ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ದುಂಬ್ರಿಗುಡಾ ಮಂಡಲ ವ್ಯಾಪ್ತಿಯ ಕಿಂಚಮಾಂಡ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ವಿಶೇಷ ಜಾರಿ ಘಟಕವು ಆರೋಪಿಗಳನ್ನು ಸೊತ್ತು ಸಹಿತ ದುಂಬ್ರಿಗುಡಾ ಪೊಲೀಸರಿಗೆ ಹಸ್ತಾಂತರಿಸಿದೆ.