ಕಾಸರಗೋಡು: ಸಿದ್ಧಾಂತ, ಪ್ರಯೋಗಗಳು ಕಲಾ ಕ್ಷೇತ್ರಗಳಲ್ಲಿ ಸದಾ ನಡೆಯುತ್ತಿದ್ದಾಗ ಕಲೆ ಬೆಳೆಯಲು ಸಹಾಯವಾಗುತ್ತದೆ ಎಂದು ಹಿರಿಯ ಅರ್ಥಧಾರಿ ಡಾ. ರಮಾನಂದ ಬನಾರಿ ತಿಳಿಸಿದ್ದಾರೆ. ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ(ರಿ) ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ನಡೆದ ಅರ್ಥಾಂತರಂಗ-14'ತಾಳಮದ್ದಳೆಯಲ್ಲಿ ಕರ್ಣಪರ್ವ'ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಡಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಲಮಿತಿ ಆಟ-ಕೂಟ, ಧ್ವನಿವರ್ಧಕ, ಪ್ರಸ್ತುತಿ, ಅರ್ಥಗಾರಿಕೆ ಮುಂತಾದ ವಿಚಾರಗಳ ಬಗ್ಗೆ ಪ್ರೌಢಚಿಂತನೆಗಳನ್ನು ಹಂಚಿಕೊಂಡರು. ಉದ್ಯಮಿ ಪ್ರೇಮನಾಥ ಮಾರ್ಲ ಮೂಡಬಿದರೆ, ನಿವೃತ್ತ ಬ್ಯಾಂಕ್ ಉದ್ಯೋಗಿ ನರಸಿಂಹ ಮೂರ್ತಿ ತೋನ್ಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಬಹುಮಾನ ಗಳಿಸಿದ್ದ ಹೊಸಹಿತ್ಲು ಅಭಿರಾಮ ಶರ್ಮ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಪ್ಪೆ ಶಾಂತಪ್ಪಯ್ಯ ಅವರ ಕರ್ಣಪರ್ವ(ಕೃಷ್ಣಾರ್ಜುನರ ಕಾಳಗ)ಪ್ರಸಂಗದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರ ನಡೆಯಿತು. ತಾಳಮದ್ದಳೆಗೆ ಸಂಬಂಧಿಸಿದಂತೆ ಚಿಂತಕರಿಂದ ನಿರ್ಧಿಷ್ಟ ವಿಚಾರಗಳನ್ನು ಆಧರಿಸಿ ತಾಳಮದ್ದಳೆಯಾಗಿ ಕೃತಿಯನ್ನು ಕಾಲಮಿತಿಗೆ ಸೊಗಸಾಗಿ ಹೇಗೆ ತರಬಹುದು ಎಂಬ ವಿಚಾರಗಳನ್ನು ಮಂಡಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಸಂಪಾಜೆ, ಪುತ್ತೂರು ರಮೇಶ್ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಹಕರಿಸಿದರು. ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಅರ್ಥಾಂತರಂಗ ಕಾರ್ಯಕ್ರಮವನ್ನು ನಿರೂಪಿಸಿದರು. ಹಿಮ್ಮೇಳದ ಸ್ಪಂದನ-ಪ್ರತಿಕ್ರಿಯೆ, ರಾಗ-ಭಾವ ಸಂಬಂಧ, ಹಾಡು ಮತ್ತು ಅರ್ಥದ ಲಯ, ಭಾವಭಿವ್ಯಕ್ತಿ, ಪದ್ಯದ ಆವರಣದೊಳಗೆ ಅರ್ಥದ ವಿಸ್ತಾರ, ಧ್ವನಿವರ್ಧಕರ ಸಮರ್ಪಕ ಬಳಕೆ ಬಗ್ಗೆ ಹಿರಿಯ ಕಲಾವಿದರು, ವಿದ್ವಾಂಸರು ನಡೆಸಿಕೊಟ್ಟ ಸಂವಾದ ಮನ್ನಣೆಗೆ ಪಾತ್ರವಾಯಿತು.
'ಅರ್ಥಾಂತರಂಗ-14: ತಾಳಮದ್ದಳೆಯಲ್ಲಿ ಕರ್ಣಪರ್ವ'-ಜನಮನ್ನಣೆಗೆ ಕಾರಣವಾದ ಸಂವಾದ
0
ನವೆಂಬರ್ 06, 2022
Tags