ವಿಶ್ವಸಂಸ್ಥೆ : ವಿಶ್ವದ ಜನಸಂಖ್ಯೆ ನವೆಂಬರ್ 15ರ ಒಳಗೆ 800 ಕೋಟಿ ತಲುಪಲಿದೆ ಎಂದ ವಿಶ್ವ ಸಂಸ್ಥೆ ಅಂದಾಜಿಸಿದೆ.
2023ರಲ್ಲಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಚೀನಾದ ಸ್ಥಾನದಲ್ಲಿ ಭಾರತ ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಈ ವರ್ಷ ಜುಲೈ 11ರಂದು ನಡೆದ ವಿಶ್ವ ಜನಸಂಖ್ಯೆ ದಿನದಂದು ಬಿಡುಗಡೆ ಮಾಡಲಾದ ವಿಶ್ವಸಂಸ್ಥೆಯ ''ವಿಶ್ವ ಜನಸಂಖ್ಯೆ ನಿರೀಕ್ಷೆ-2022''ನಲ್ಲಿ ಈ ಮಾಹಿತಿ ಬಹಿರಂಗಗೊಂಡಿತ್ತು. ಆದರೆ, ಈಗ ನವೆಂಬರ್ 15ಕ್ಕೆ ಕೆಲವೇ ದಿನಗಳು ಇರುವುದರಿಂದ ಈ ವರದಿ ಮಾಧ್ಯಮಗಳ ಗಮನ ಸೆಳೆದಿದೆ.
ವಿಶ್ವ ಜನಸಂಖ್ಯೆಯ ಬೆಳವಣಿಗೆ 1950ರಿಂದ ಮೊದಲ ಬಾರಿಗೆ 2020ರಲ್ಲಿ ಶೇ. 1 ಇಳಿಕೆಯಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
2050ರ ವರೆಗೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾದ ಅರ್ಧದಷ್ಟು ಜನಸಂಖ್ಯೆ ಕೇವಲ 8 ದೇಶಗಳಾದ ಕಾಂಗೊ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಝೀರಿಯಾ, ಪಾಕಿಸ್ತಾನ, ಫಿಲಿಪ್ಪೈನ್ ಹಾಗೂ ತಾಂಝೇನಿಯಾದಲ್ಲಿ ಹೆಚ್ಚಾಲಿದೆ. ವಿಶ್ವದ ಜನಸಂಖ್ಯೆ 2030ರಲ್ಲಿ 850 ಕೋಟಿ, 2050ರಲ್ಲಿ 970 ಕೋಟಿ, 2080ರಲ್ಲಿ ಅತ್ಯಧಿಕ 1400 ಕೋಟಿಗೆ ಏರಿಕೆಯಾಗಲಿದೆ. ಅನಂತರ 2100ರ ವರೆಗೆ ಅದು ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಸಂಸ್ಥೆಯ ಇತ್ತೀಚೆಗಿನ ಅಂದಾಜು ಹೇಳಿದೆ.