ತೃಶೂರು: ಗುರುವಾಯೂರಿನಲ್ಲಿ ಆಯೋಜಿಸಲಾದ ವಿವಾಹ ಸಮಾರಂಭಕ್ಕೆ ಇಲ್ಲೊಬ್ಬ ವರ ಕೋಯಂಬತ್ತೂರಿನಿಂದ ಆಗಮಿಸಿದ್ದು 150 ಕಿ.ಮೀ ಸೈಕಲ್ ತುಳಿದು. ಕೋಯಂಬತ್ತೂರು ತೊಂಟಮೂತ್ತೂರು ಸೆಂತಿಲ್ ರಾಮನ್ ಮತ್ತು ಜ್ಯೋತಿಮಣಿ ದಂಪತಿಗಳ ಪುತ್ರ ಶಿವಸೂರ್ಯನನ್(28) ವಿವಾಹಕ್ಕೆ ತನ್ನ ವಾಹನ ಸೈಕಲ್ ನೊಂದಿಗೆ ಆಗಮಿಸಿದವನು.
ವರನೊಂದಿಗೆ ಆತನ ಐವರು ಗೆಳೆಯರು ಸೈಕಲ್ ಮೂಲಕವೇ ಗುರುವಾಯೂರಿಗೆ ತಲುಪಿದರು. 'ರೈಡ್ ಟು ಮ್ಯಾರೇಜ್'- ಕೋಯಂಬತ್ತೂರ್ ಟು ಗುರುವಾಯೂರ್' ಎಂಬುದಾಗಿ ಬರೆದ ಬೋರ್ಡ್ ಹಾಕಲಾಗಿತ್ತು.
ಕಣ್ಣೂರು ಪಾನೂರು ಮನೆಯಲ್ಲಿ ಸತ್ಯನ್ ಎಂಬವರ ಪುತ್ರಿ ಅಚಿಜನ ಶಿವನ ವಧು. ಶನಿವಾರ ಬೆಳಿಗ್ಗೆ ತಂಡವು ಕೋಯಂಬತ್ತೂರಿನಿಂದ ಪ್ರಯಾಣ ಬೆಳೆಸಿತು. ದೇವಸ್ವಂ ನ ಕೌಸ್ತುಭಂ ಗೌಸ್ಟ್‍ಹೌಸ್‍ನಲ್ಲಿ ಇವರ ವಿವಾಹ ಏರ್ಪಡಿಸಲಾಗಿತ್ತು. ಸಂಬಂಧಿಕರು ವಧುವಿನ ಮನೆಯವರು ರಾತ್ರಿಯೇ ತಲಪಿದ್ದರು.
ಅಶೋಕ್ ಗ್ರಾಮಲಿಂಗಂ, ದಿನೇಶ್ ಮುರುಕೇಶ್, ಉμÁ ಕಣ್ಣನ್, ಮಣಿಕಂಠ ಗೋವಿಂದರಾಜ್, ನಾಶಿಕೇದ್ ವೆಂಕಟ್ ಅವರು ಸೈಕಲ್ ಯಾತ್ರೆಯಲ್ಲಿ ವರನ ಜೊತೆಗಿದ್ದರು. ಪರಿಸರ ಕಾರ್ಯಕರ್ತರಾದ ಇವರು ಗುಜರಾಥಿನ ಖಾಸಗಿ ಕಂಪೆನಿಯೊಂದರಲ್ಲಿ ಎಂಜಿನಿಯರ್ ಗಳು. ವಧು ಅಹಮ್ಮದಾಬಾದ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ಎರಡು ವರ್ಷಗಳ ಕಾಲದ ಪ್ರಣಯವು ಗುರುವಾಯೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸಾಕಾರಗೊಂಡಿತು.
ಗುರುವಾಯೂರಿನಲ್ಲಿ ನಡೆದ ತನ್ನ ವಿವಾಹಕ್ಕೆ ಸೈಕಲ್ ನಲ್ಲಿ ಆಗಮಿಸಿದ ವರ: ಐವರು ಸ್ನೇಹಿತರೊಂದಿಗೆ 150 ಕಿ.ಮೀ ಸೈಕಲ್ ತುಳಿದು ಹಸೆಮಣೆ ಏರಿದ ಹೀಗೊಬ್ಬ ಪರಿಸರವಾದಿ ವರ
0
ನವೆಂಬರ್ 06, 2022