ನವದೆಹಲಿ: ಫ್ರಾನ್ಸ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ತನ್ನ 36ನೇ ರಫೇಲ್ ಯುದ್ಧ ವಿಮಾನವನ್ನು ಭಾರತ ಡಿಸೆಂಬರ್ 15ರ ಮೊದಲು ಪಡೆದುಕೊಳ್ಳಲಿದೆ ಎಂದು ವರದಿಯಾಗಿದೆ. 2016ರಲ್ಲಿ 59,000 ಕೋಟಿ ರೂಪಾಯಿಯ ಒಪ್ಪಂದ ಇದಾಗಿತ್ತು. ಫ್ರಾನ್ಸ್ನ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ರಫೇಲ್ ವಿಮಾನಗಳನ್ನು ನಿರ್ವಿುಸಿದೆ.
ಒಪ್ಪಂದದ ಪ್ರಕಾರ ಈಗಾಗಲೇ ಭಾರತಕ್ಕೆ 35 ರಫೇಲ್ ವಿಮಾನಗಳು ಬಂದಿಳಿದಿವೆ. ಇವು ಪಶ್ಚಿಮ ಬಂಗಾಳ, ಅಂಬಾಲಾ ಹರಿಯಾಣ, ಹಶಿಮಾರಾ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ವಾಯುಸೇನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಯುಪಡೆ, ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಮುಂದಾಗಿತ್ತು.
ರಫೇಲ್ ಯುದ್ಧ ವಿಮಾನ ಸುಧಾರಿತ ವಿಮಾನವಾಗಿದ್ದು, ಜಗತ್ತಿನ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆಕಾಶ ಹಾಗೂ ನೌಕಾನೆಲೆಯಿಂದ ಯುದ್ಧ ಮಾಡುವ ಸಾಮರ್ಥ್ಯ ಹೊಂದಿದ್ದು, ವೈಮಾನಿಕ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.