ಕಾಸರಗೋಡು :ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ಸಾರ್ವಜನಿಕರ ಸಮಸ್ಯೆ ಗಳನ್ನು ಪರಿಗಣಿಸಲು ಮತ್ತು ಗ್ರಾಮ ಕಛೇರಿಯಲ್ಲಿನ ಕಾರ್ಯವಿಧಾನಗಳನ್ನು ಪರಿಶೀಲಿಸಲು ನಡೆಸುವ ಗ್ರಾಮ ಕಛೇರಿ ಭೇಟಿ ಮುಂದುವರಿಯುತ್ತಿದೆ.
ಅಂಬಲತ್ತರ ಮತ್ತು ಪುಲ್ಲೂರು ಗ್ರಾಮ ಕಛೇರಿಗಳಿಗೆ ಶುಕ್ರವಾರ ಭೇಟಿ ನೀಡಿದರು. ಅಂಬಲತ್ತರ ಗ್ರಾಮ ಕಛೇರಿಗೆ ಸಾರ್ವಜನಿಕರಿಂದ ಎಂಟು ದೂರುಗಳು ಲಭಿಸಿವೆ. ಹೆಚ್ಚಿನ ದೂರುಗಳು ಭೂ ಮಂಜೂರಾತಿ ಮತ್ತು ಭೂ ಮರು ವಿಂಗಡಣೆಗೆ ಸಂಬಂಧಿಸಿದವುಗಳಾಗಿದ್ದವು. ಜಿಲ್ಲಾಧಿಕಾರಿ ಪುಲ್ಲೂರು ಗ್ರಾಮ ಕಛೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ನವೆಂಬರ್ 17 ರಂದು ಗುರುವಾರ ಆದೂರು ಮತ್ತು ಮುಳಿಯಾರ್ ಗ್ರಾಮ ಕಛೇರಿಗಳಿಗೆ ಭೇಟಿ ನೀಡುವರು.