ತಿರುವನಂತಪುರ: ತಪಸ್ಯ ಕಲಾಸಾಹಿತ್ಯವೇದಿಯ ಈ ವರ್ಷದ ಅಕ್ಕಿತ್ತಂ ಪ್ರಶಸ್ತಿಯನ್ನು ಶ್ರೀಕುಮಾರನ್ ತಂಬಿ ಅವರಿಗೆ ಘೋಷಿಸಿದೆ. ಈ ಬಗ್ಗೆ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಶಸ್ತಿಯು ಒಂದು ಲಕ್ಷ ರೂ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 18 ರಂದು ತಿರುವನಂತಪುರದಲ್ಲಿ ಆಯೋಜಿಸಲಾಗುವ ಅಕ್ಕಿತ್ತಂ ಸ್ಮಾರಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪಿ.ನಾರಾಯಣಕುರುಪ್, ಆಶಾ ಮೆನನ್ ಮತ್ತು ಕಲ್ಲರ ಅಜಯನ್ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿಯನ್ನು ನಿರ್ಧರಿಸಿತು. ಕವಿ, ಗೀತರಚನೆಕಾರ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿ, ಮಲಯಾಳಂ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಭಾರತೀಯ ಸಂಸ್ಕøತಿಯ ಅನನ್ಯತೆಯನ್ನು ಸಾರಿದ ಮೇಧಾವಿ ಶ್ರೀಕುಮಾರನ್ ತಂಬಿ ಅವರು ಮಹಾಕವಿ ಅಕಿತ್ತಂ ಅವರೊಂದಿಗೂ ನಿಕಟ ಸಂಬಂಧ ಹೊಂದಿದ್ದ ವ್ಯಕ್ತಿ ಎಂದು ತೀರ್ಪುಗಾರರು ಹೇಳಿದ್ದಾರೆ. ಎಂ.ಟಿ. ವಾಸುದೇವನ್ ನಾಯರ್ ಅವರು ಮೊದಲ ಅಕ್ಕಿತ್ತಂ ಪ್ರಶಸ್ತಿಯನ್ನು ಪಡೆದವರು.
ತಪಸ್ಯ ರಾಜ್ಯಾಧ್ಯಕ್ಷ ಪೆÇ್ರ.ಪಿ.ಜಿ.ಹರಿದಾಸ್ ರಾಜ್ಯ ಉಪಾಧ್ಯಕ್ಷ ಕಲ್ಲರ ಅಜಯನ್ ರಾಜ್ಯ ಕಾರ್ಯದರ್ಶಿ ಜಿ.ಎಂ.ಮಹೇಶ್, ತಿರುವನಂತಪುರ ಜಿಲ್ಲಾಧ್ಯಕ್ಷ ಬಿಪಿನ್ ಚಂದ್ರನ್ ಕಾರ್ಯಾಧ್ಯಕ್ಷ ಕೆ.ವಿ.ರಾಜೇಂದ್ರನ್ ಉಪಸ್ಥಿತರಿದ್ದರು.
ತಪಸ್ಯ ಕಲಾಸಾಹಿತ್ಯವೇದಿಯ ಅಕ್ಕಿತ್ತಂ ಪ್ರಶಸ್ತಿ ಶ್ರೀಕುಮಾರನ್ ತಂಬಿಗೆ: ಡಿಸೆಂಬರ್ 18 ರಂದು ಪ್ರಶಸ್ತಿ ಪ್ರದಾನ
0
ನವೆಂಬರ್ 15, 2022