HEALTH TIPS

ಈ ಹಳ್ಳಿಯಲ್ಲಿ 18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಕೆಗೆ ನಿಷೇಧ!

 

                ಮುಂಬೈ: ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ 18 ವರ್ಷ ವಯಸ್ಸಿನ ಒಳಗಿನವರು ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

                ಪುಸಾದ್ ತಹಸಿಲ್ ವ್ಯಾಪ್ತಿಯ ಬನ್ಸಿ ಗ್ರಾಮ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

                  ಮಕ್ಕಳು ಗೇಮ್ಸ್ ಆಡವುದು ಮತ್ತು ಅವರ ವೀಕ್ಷಣೆಗೆ ಯೋಗ್ಯವಲ್ಲದ ವೆಬ್‌ಸೈಟ್‌ಗಳನ್ನು ಸರ್ಫಿಂಗ್ ಮಾಡುವ ವ್ಯಸನಿಗಳಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.  ಎಲ್ಲ ಪೋಷಕರಿಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಬನ್ಸಿ ಗ್ರಾಮ ಪಂಚಾಯಿತಿಯ ಸರಪಂಚ್ ಗಜಾನನ ತಾಳೆ ಹೇಳಿದ್ದಾರೆ, .

                   18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಬಳಕೆಗೆ ನಿಷೇಧ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

                'ಈ ನಿರ್ಣಯದ ಅನುಷ್ಠಾನದಲ್ಲಿ ತೊಡಕುಗಳು ಎದುರಾಗುತ್ತವೆ ಎಂಬುದು ನಮಗೆ ತಿಳಿದಿದೆ. ಆದರೆ, ನಾವು ಕೌನ್ಸೆಲಿಂಗ್ ಮೂಲಕ ಈ ಸಮಸ್ಯೆಗಳನ್ನು ನಿವಾರಿಸುತ್ತೇವೆ. ನಿಯಮದ ಉಲ್ಲಂಘನೆಗಾಗಿ ದಂಡ ವಿಧಿಸಬೇಕಾಗಬಹುದು. ಆದರೆ, ಗ್ರಾಮಸ್ಥರು ಈ ನಿರ್ಧಾರವನ್ನು ಒಮ್ಮತದಿಂದ ಬೆಂಬಲಿಸಿದ್ದಾರೆ'ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries