ಬೀಜಿಂಗ್: ಹಿಂದೂ ಮಹಾಸಾಗರದ ಪ್ರದೇಶದ 19 ರಾಷ್ಟ್ರಗಳ ಜೊತೆ ಚೀನಾ ಈ ವಾರ ಸಭೆ ನಡೆಸಿದ್ದು, ಭಾರತದ ಅನುಪಸ್ಥಿತಿ ಗಮನಾರ್ಹವಾಗಿತ್ತು.
ಅಭಿವೃದ್ಧಿ ವಿಚಾರವಾಗಿ ನಡೆದ ಸಭೆಗೆ ಭಾರತವನ್ನು ಆಹ್ವಾನಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಚೀನಾದ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕವಿರುವ ಚೀನಾ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಕೋಆಪರೇಷನ್ ಏಜೆನ್ಸಿಯು (ಸಿಐಡಿಸಿಎ) ನವೆಂಬರ್ 21 ರಂದು ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‌ನಲ್ಲಿ ಈ ಸಭೆ ನಡೆಸಿದ್ದು, ಇದರಲ್ಲಿ 19 ರಾಷ್ಟ್ರಗಳು ಭಾಗವಹಿಸಿದ್ದವು ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.