ನವದೆಹಲಿ:
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ಪ್ರಚಾರಕ್ಕಾಗಿ ಮಾಡುವ ನಗದು ವೆಚ್ಚವನ್ನು
ಈಗಿರುವ ₹10,000ದಿಂದ ₹2,000ಕ್ಕೆ ಇಳಿಸಲು ಚುನಾವಣಾ ಆಯೋಗ ಮುಂದಾಗಿದೆ. ಚುನಾವಣಾ
ಪ್ರಚಾರದಲ್ಲಿ ಅಭ್ಯರ್ಥಿಯ ಪ್ರಚಾರ ವೆಚ್ಚದಲ್ಲಿ ಹೆಚ್ಚು ಪಾರದರ್ಶಕತೆ
ಕಾಯ್ದುಕೊಳ್ಳುವುದು ಇದರ ಉದ್ದೇಶ ಎಂದು ಮೂಲಗಳು ತಿಳಿಸಿವೆ.
ಚುನಾವಣಾ
ನಿಯಮಗಳಲ್ಲಿ ತಿದ್ದುಪಡಿ ತರುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಆಯೋಗ,
ಅಭ್ಯರ್ಥಿಯು ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಚೆಕ್, ಆನ್‌ಲೈನ್ ಅಥವಾ
ಡಿಜಿಟಲ್ ರೂಪದಲ್ಲಿ ಪಾವತಿ ಮಾಡಬೇಕು ಎಂದು ಶಿಫಾರಸು ಮಾಡಿದೆ. ಚುನಾವಣೆ ವೆಚ್ಚಗಳನ್ನು
ಬ್ಯಾಂಕ್ ಖಾತೆಯ ಮೂಲಕ ನಿರ್ವಹಿಸಬೇಕಿದೆ.