ತಿರುವನಂತಪುರ: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡ ಬೆನ್ನಲ್ಲೇ ಕೇರಳ ಮತ್ತೆ ಸಾಲ ಪಡೆಯಲು ಸಿದ್ಧತೆ ನಡೆಸಿದೆ.
ಈ ಬಾರಿ 2000 ಕೋಟಿ ಸಾಲ ಮಾಡಲಾಗುತ್ತಿದೆ. ಇದರೊಂದಿಗೆ ಈ ವರ್ಷದ ಸಾಲ 15,436 ಕೋಟಿ ರೂ.ಗೆ ಹೆಚ್ಚಳಗೊಳ್ಳಲಿದೆ. ಮುಂದಿನ ತಿಂಗಳು ಸಂಬಳ ಮತ್ತು ಪಿಂಚಣಿ ನೀಡಲು ಸಾಲ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ ಡಿಸೆಂಬರ್ ವರೆಗೆ ಒಟ್ಟು 17,936 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ 2000 ಕೋಟಿ ಸಾಲ ಪಡೆಯಲಾಗಿದೆ. ಈಗ ಕೇವಲ 2500 ಕೋಟಿ ಮಾತ್ರ ಉಳಿದಿದೆ. ಡಿಸೆಂಬರ್ ನಂತರ ಕೇಂದ್ರ ಹೆಚ್ಚಿನ ಸಾಲ ನೀಡದಿದ್ದರೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಣದ ಕೊರತೆಯಿಂದ ಹಲವು ಯೋಜನೆಗಳು ಈಗಾಗಲೇ ನನೆಗುದಿಗೆ ಬಿದ್ದಿವೆ.
ಸಾಲ ಮಾಡದೆ ಸರ್ಕಾರ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಅಂದಾಜು. ಅನಗತ್ಯ ವೆಚ್ಚಗಳನ್ನು ತಪ್ಪಿಸಲು ಇನ್ನೂ ಪರಿಣಾಮಕಾರಿ ಯೋಜನೆ ರೂಪಿಸಬೇಕಿದೆ.
2,000 ಕೋಟಿ ಸಾಲಪತ್ರಗಳನ್ನು ನೀಡಲು ಹಣಕಾಸು ಇಲಾಖೆ ಅಧಿಸೂಚನೆ ಹೊರಡಿಸಿದೆ. ನವೆಂಬರ್ 29 ರಿಂದ ಹರಾಜು ನಡೆಯಲಿದೆ.
ತೀವ್ರ ಮುಗ್ಗಟ್ಟು: ಇನ್ನೂ 2000 ಕೋಟಿ ರೂಪಾಯಿ ಸಾಲ ಮಾಡಲು ಸರ್ಕಾರದಿಂದ ಸಿದ್ಧತೆ
0
ನವೆಂಬರ್ 25, 2022
Tags