ಕಾಸರಗೋಡು: ರಾಷ್ಟ್ರೀಯ ಉದ್ಯೋಗ ಸೇವೆ (ಕೇರಳ) ಇಲಾಖೆಯ ಆಶ್ರಯದಲ್ಲಿ, 'ನಿಯುಕ್ತಿ-2022' ಎಂಬ ಮೆಗಾ ಉದ್ಯೋಗ ಮೇಳವನ್ನು ಎಲ್ಲಾ ಜಿಲ್ಲೆಗಳಲ್ಲಿ ಯೂ ನಡೆಸಲಾಗುವುದು. ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಮೆಗಾ ಉದ್ಯೋಗ ಮೇಳವು ಡಿಸೆಂಬರ್ 10ರಂದು ಪೆರಿಯ ಶ್ರೀ ನಾರಾಯಣ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನಲ್ಲಿ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಇರುವ ಸಂಸ್ಥೆಗಳು www.jobfest.kerala.gov.in ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994255582, 9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
'ನಿಯುಕ್ತಿ 2022'-ಡಿ.10 ರಂದು ಮೆಗಾ ಉದ್ಯೋಗ ಮೇಳ
0
ನವೆಂಬರ್ 17, 2022