ನವದೆಹಲಿ:ಕೋಟಾ ಆಧಾರದಲ್ಲಿ 2022-23ರ ಸಾಲಿನಲ್ಲಿ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಲು ಕೇಂದ್ರ ಸರಕಾರ ಶನಿವಾರ ಅನುಮತಿ ನೀಡಿದೆ.
ಅನಿಯಂತ್ರಿತ ಸಕ್ಕರೆ ರಫ್ತು ಹಾಗೂ ದೇಶದಲ್ಲಿ ಸಮರ್ಪಕ ಬೆಲೆಯಲ್ಲಿ ಬಳಕೆಗೆ ಅದರ ಲಭ್ಯತೆಯ ಖಾತರಿ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಹಾಗೂ ಸಾರ್ವಜನಿಕ ವಿತರಣೆ ಇಲಾಖೆ ಹೇಳಿದೆ.