HEALTH TIPS

2022ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ.7ಕ್ಕೆ ತಗ್ಗಿಸಿದ ಮೂಡಿಸ್ ಸಂಸ್ಥೆ ಹೇಳಿದ್ದೇನು?

         ಅಧಿಕ ಹಣದುಬ್ಬರ , ಹೆಚ್ಚಿನ ಬಡ್ಡಿದರಗಳು ಮತ್ತು ಆರ್ಥಿಕ ಆವೇಗವನ್ನು ನಿರೀಕ್ಷೆ ಗಿಂತ ಹೆಚ್ಚು ಕುಂಠಿತಗೊಳಿಸಲಿರುವ ಜಾಗತಿಕ ಆರ್ಥಿಕ ಹಿಂಜರಿತಗಳ ಹಿನ್ನೆಲೆಯಲ್ಲಿ ರೇಟಿಂಗ್ಸ್ ಏಜೆನ್ಸಿ ಮೂಡೀಸ್ (Ratings agency Moody's)ಪ್ರಸಕ್ತ ಮತ್ತು ಮುಂದಿನ ಕ್ಯಾಲೆಂಡರ್ ವರ್ಷಗಳಿಗೆ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನಂದಾಜನ್ನು ತಗ್ಗಿಸಿದೆ.

                   ಭಾರತದ ಜಿಡಿಪಿ (GDP) ಬೆಳವಣಿಗೆಯು ತನ್ನ ಹಿಂದಿನ ಅಂದಾಜು ಶೇ.7.7ಕ್ಕೆ ಹೋಲಿಸಿದರೆ 2022ರಲ್ಲಿ ಶೇ.7ಕ್ಕೆ ಮತ್ತು 2023ರಲ್ಲಿ ಇನ್ನಷ್ಟು ಕುಸಿದು ಶೇ.4.8ಕ್ಕೆ ತಲುಪಲಿದೆ, ಆದರೆ 2024ರಲ್ಲಿ ಸುಮಾರು ಶೇ.6.4ಕ್ಕೆ ಚೇತರಿಸಿಕೊಳ್ಳಲಿದೆ ಎಂದು ಮೂಡಿಸ್ ತಿಳಿಸಿದೆ.

                  ಆರ್ಬಿಐ(RBI) 2022-23ನೇ ಸಾಲಿಗೆ ಶೇ.7ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿದೆ.

               ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ವಿನಿಮಯ ದರವನ್ನು ಬೆಂಬಲಿಸಲು ತನ್ನ ಪ್ರಯತ್ನಗಳ ಅಂಗವಾಗಿ ಆರ್ಬಿಐ ರೆಪೊ ದರವನ್ನು ಇನ್ನೊಂದು 50 ಮೂಲಾಂಕಗಳಿಂದ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಮೂಡಿಸ್ ನಲ್ಲಿಯ ಆರ್ಥಿಕ ತಜ್ಞರು ಟಿಪ್ಪಣಿಯಲ್ಲಿ ಬರೆದಿದ್ದಾರೆ.

              ಅಂತಿಮವಾಗಿ ಆರ್ಬಿಐ, ದರ ಏರಿಕೆಗಳು ಹಣದುಬ್ಬರ ಒತ್ತಡಕ್ಕೆ ಕಡಿವಾಣ ಹಾಕುವಲ್ಲಿ ಅಪೇಕ್ಷಿತ ಪರಿಣಾಮವನ್ನು ಬೀರಿದರೆ ಹಣದುಬ್ಬರ ನಿರ್ವಹಣೆಯ ಬದಲು ಬೆಳವಣಿಗೆ ಪರಿಗಣನೆಗಳತ್ತ ತನ್ನ ಗಮನವನ್ನು ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದಾರೆ.

               ಆರ್ಬಿಐ ಈಗಾಗಲೇ ಹಣದುಬ್ಬರವನ್ನು ನಿಯಂತ್ರಿಸಲು ಮೇ ತಿಂಗಳಿನಿಂದ ಬಡ್ಡಿದರಗಳನ್ನು 190 ಮೂಲಾಂಕಗಳಷ್ಟು ಹೆಚ್ಚಿಸಿದೆ,ಆದಾಗ್ಯೂ ಹಣದುಬ್ಬರವು ವರ್ಷದ ಹೆಚ್ಚಿನ ಅವಧಿಯಲ್ಲಿ ಆರ್ಬಿಐ ನ ಸಹಿಷ್ಣುತೆ ಮಟ್ಟವಾದ ಶೇ.6ಕ್ಕಿಂತ ಮೇಲೆಯೇ ಇದೆ.

           ದುರ್ಬಲಗೊಳ್ಳುತ್ತಿರುವ ಭಾರತೀಯ ರೂಪಾಯಿ ಮತ್ತು ಅಧಿಕ ತೈಲದರಗಳು ಹಣದುಬ್ಬರದ ಮೇಲೆ ಮೇಲ್ಮುಖ ಒತ್ತಡವನ್ನು ಮುಂದುವರಿಸಲಿವೆ ಎಂದು ಮೂಡಿಸ್ ಹೇಳಿದೆ.

         ಆದಾಗ್ಯೂ ಸೇವಾ ಚಟುವಟಿಕೆ ಮತ್ತೆ ಪುಟಿದೆದ್ದಿರುವ ಹಿನ್ನೆಲೆಯಲ್ಲಿ ಭಾರತದ ಬೆಳವಣಿಗೆ ಚಲನಶೀಲತೆಯು ಮೂಲಭೂತವಾಗಿ ಬಲವಾಗಿದೆ ಎಂದು ಅದು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries