ಅಡಿಲೇಡ್: ನಾಯಕ ರೋಹಿತ್ ಶರ್ಮಾ ನಾಯಕತ್ವಕ್ಕೂ ಟೀಂ ಇಂಡಿಯಾ ಪಾರುಪತ್ವ ಮೆರೆಯುವಲ್ಲಿ ಸೋತಿದೆ. ಟಿ20 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಿದೆ.
ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಬಾರಿಸಿದ್ದು ಇಂಗ್ಲೆಂಡ್ ಗೆ ಗೆಲ್ಲಲು 169 ರನ್ ಗಳ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ವಿಕೆಟ್ ನಷ್ಟವಿಲ್ಲದೆ 170 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ.
ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಅಜೇಯ 80 ಹಾಗೂ ಅಲೆಕ್ಸ್ ಹಾಲೆಸ್ ಅಜೇಯ 86 ರನ್ ಪೇರಿಸಿದ್ದು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಭಾರತ ಪರ ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 27 ರನ್ ಪೇರಿಸಿದ್ದಾರೆ. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 50 ರನ್ ಬಾರಿಸಿದ್ದು ಕೊಹ್ಲಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಸಹ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 63 ರನ್ ಕಲೆಹಾಕಿದ್ದಾರೆ. ಹೀಗಾಗಿ ಭಾರತ 168 ರನ್ ಪೇರಿಸಲು ಸಾಧ್ಯವಾಯಿತು.
ಅದಾಗಲೇ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನವೆಂಬರ್ 13ರಂದು ಫೈನಲ್ ಹಣಾಹಣಿ ನಡೆಯಲಿದೆ.