ನವದೆಹಲಿ: ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಅಕ್ಟೋಬರ್ ತಿಂಗಳಲ್ಲಿ 20 ತಿಂಗಳಲ್ಲೇ ಗರಿಷ್ಠ ಕುಸಿತ ದಾಖಲಿಸಿದೆ. ಮಾ.2021 ರ ಬಳಿಕ ಅಕ್ಟೋಬರ್ ತಿಂಗಳ ಡಬ್ಲ್ಯುಪಿಐ ಗರಿಷ್ಠ ಅಂದರೆ, ಶೇ.8.39 ಕ್ಕೆ ಕುಸಿದಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ವರ್ಗಾವಣೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಶೇ.10.70 ಕ್ಕೆ ಡಬ್ಲ್ಯುಪಿಐ ಕುಸಿತ ಕಂಡಿತ್ತು.
18 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಸಗಟು ಹಣದುಬ್ಬರ 2 ಅಂಕಿಗಳಿಗಿಂತ ಕಡಿಮೆ ದಾಖಲಾಗಿದೆ. ಮೇ.2022 ರಲ್ಲಿ ಡಬ್ಲ್ಯುಪಿಐ ಶೇ.15.88 ಕ್ಕೆ ಏರಿತ್ತು ಇದಕ್ಕೂ ಮೊದಲು 2021 ರ ಅಕ್ಟೋಬರ್ ತಿಂಗಳಲ್ಲಿ ಶೇ.13.83 ರಷ್ಟಿತ್ತು. ಖನಿಜ ತೈಲಗಳ ಬೆಲೆ ಇಳಿಕೆ, ಮೂಲ ಲೋಹಗಳು, ತಯಾರಿಸಿದ ಲೋಹದ ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಹೊರತುಪಡಿಸಿ, ಜವಳಿ, ಇತರ ಲೋಹವಲ್ಲದ ಖನಿಜ ಉತ್ಪನ್ನಗಳು, ಖನಿಜಗಳು ಮುಂತಾದ ಪದಾರ್ಥಗಳ ಬೆಲೆ ಇಳಿಕೆಯಾಗಿದ್ದರಿಂದ ಅಕ್ಟೋಬರ್ 2022 ರ ಹಣದುಬ್ಬರ ಕುಸಿತ ಕಂಡಿದೆ ಎಂದು ಅಧಿಕೃತ ಪ್ರಕಟನೆಯಲ್ಲಿ ಸರ್ಕಾರ ತಿಳಿಸಿದೆ.
ಪ್ರಾಥಮಿಕ ಪದಾರ್ಥಗಳ ಹಣದುಬ್ಬರ ಶೇ.11.-04 ರಷ್ಟಿದ್ದರೆ, ಆಹಾರ ಪದಾರ್ಥಗಳ ಹಣದುಬ್ಬರ 2021 ರ ಅಕ್ಟೋಬರ್ ನಲ್ಲಿ ಶೇ.8.33 ರಷ್ಟಿತ್ತು. ಈ ಅಂಕಿ-ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಆರ್ ಇ ರೇಟಿಂಗ್ಸ್ ನ ಮುಖ್ಯ ಅರ್ಥಶಾಸ್ತ್ರಜ್ಞ ರಣಜಿ ಸಿನ್ಹಾ, 18 ತಿಂಗಳಲ್ಲಿ ಮೊದಲ ಬಾರಿಗೆ ಡಬ್ಲ್ಯುಪಿಐ ಹಣದುಬ್ಬರ ಒಂದು ಅಂಕಿಗೆ ಕುಸಿದಿದೆ. ಡಬ್ಲ್ಯುಪಿಐ ಹಣದುಬ್ಬರ ಕುಸಿತಕ್ಕೆ ಜಾಗತಿಕ ಸರಕು ಬೆಲೆಗಳಲ್ಲಿ ಇಳಿಕೆ ಮತ್ತು ಅನುಕೂಲಕರ ಬೇಸ್ ಗಳು ಮತ್ತಷ್ಟು ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.
ದುರ್ಬಲ ರೂಪಾಯಿ ಹಾಗೂ ಆಹಾರ ಹಣದುಬ್ಬರದಿಂದ ಆಮದು ಹಣದುಬ್ಬರ ಹೆಚ್ಚಾಗಲಿದ್ದು ಸಗಟು
ಡಬ್ಲ್ಯುಪಿಐ ಹಣದುಬ್ಬರದ ಮೇಲಿನ ಒತ್ತಡ ಇನ್ನೂ ಕೆಲ ಕಾಲ ಮುಂದುವರೆಯಲಿದೆ 2023 ನೇ
ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಸಿಪಿಐ ಹಣದುಬ್ಬರ ಕಡಿಮೆಯಾಗುವ
ನಿರೀಕ್ಷೆ ಇದೆ ಎಂದು ಸಿನ್ಹಾ ಹೇಳಿದ್ದಾರೆ.