HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವ ಎಂ.ಬಿ.ರಾಜೇಶ್: ನವಕೇರಳ ಸ್ಥಳೀಯಾಡಳಿತ 2.0 ಕಾಸರಗೋಡು ಜಿಲ್ಲಾ ಮಟ್ಟದ ಪರಾಮರ್ಶೆ


           ಕಾಸರಗೋಡು: ಸ್ಥಳೀಯಾಡಳಿತ  ಸಂಸ್ಥೆಗಳು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿದರು.
          'ನವಕೇರಳಂ ಸ್ಥಳೀಯಾಡಳಿತ 2.0' ಜಿಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ  ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
         14ನೇ ಪಂಚವಾರ್ಷಿಕ ಯೋಜನೆಯು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳು ಸ್ಥಳೀಯ ಆರ್ಥಿಕ ಅಭಿವೃದ್ಧಿಯ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಆರ್ಥಿಕ ವರ್ಷದ ಅರ್ಧ ಅವಧಿ ಮುಗಿದಿದೆ. ಮುಂದಿನ ನಾಲ್ಕು ತಿಂಗಳೊಳಗೆ ಯೋಜನೆ ಅನುಷ್ಠಾನವನ್ನು ಸಮರ್ಥವಾಗಿ ಪೂರ್ಣಗೊಳಿಸಿ ಯೋಜನೆಯ ಮೊತ್ತವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಹಿಂದೆ ಸೇವೆಗಳನ್ನು ಒದಗಿಸುವುದು ಸ್ಥಳೀಯಾಡಳಿತಗಳ  ಮುಖ್ಯ ಉದ್ದೇಶವಾಗಿದ್ದರೆ, ಇಂದು ಉತ್ಪಾದನಾ ವಲಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೇರಳ ಉತ್ತಮ ಪ್ರಗತಿ ಸಾಧಿಸಿದೆ. ಈ ಲಾಭಗಳನ್ನು ಉಳಿಸಿಕೊಳ್ಳಲು, ಆರ್ಥಿಕ ಬೆಳವಣಿಗೆ ಇರಬೇಕು. ಆದ್ದರಿಂದ ಉದ್ದಿಮೆಗಳನ್ನು ಬೆಳೆಸಬೇಕು. ಅತಿ ಹೆಚ್ಚು ಕಿರು ಉದ್ಯಮಗಳು ಆಗಬೇಕು. ಇವರೆಲ್ಲರನ್ನೂ ಸಮನ್ವಯಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳು ವೇದಿಕೆಯಾಗಬೇಕು.  ಒಂದು ವರ್ಷದಲ್ಲಿ 1 ಲಕ್ಷ ಉದ್ಯಮಿಗಳ ಪರಿಕಲ್ಪನೆಯೊಂದಿಗೆ, 7 ತಿಂಗಳ ನಂತರ, 80000 ಉದ್ಯಮಿಗಳು ಕೇರಳದಲ್ಲಿ ಪ್ರಾರಂಭಿಸಲು ಸಾಧ್ಯವಾಯಿತು. 1,83,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿ 1924 ಉಪಕ್ರಮಗಳು ನಡೆದಿವೆ. ಸ್ಥಳೀಯಾಡಳಿತ ಸಂಸ್ಥೆಗಳು ಇವುಗಳ ಸದುಪಯೋಗ ಪಡೆದು ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಬಡವರನ್ನು ಶಾಶ್ವತ ಬಡತನದಿಂದ ಮೇಲೆತ್ತಲು ಸರ್ಕಾರ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಡು ಬಡತನ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಅವರ ಅಗತ್ಯಗಳು ವಿಭಿನ್ನವಾಗಿವೆ. ಅವುಗಳನ್ನು ಈಡೇರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದರು.



           ತ್ಯಾಜ್ಯ ನಿರ್ವಹಣೆಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳು ವಾರ್ಷಿಕ ಯೋಜನೆ ಮೊತ್ತವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಮತ್ತು ಇದಕ್ಕೆ ಇರುವ ಅಡೆತಡೆಗಳನ್ನು ಪರಿಹರಿಸಲಾಗುವುದು. ಅಲ್ಲದೆ ಮನೆ-ಮನೆ ಸೇವೆಗಳು, ಲೈಫ್ ಮಿಷನ್ ವಸತಿ ನಿರ್ಮಾಣ ಹಂತ,  ಎಬಿಸಿ ಕೇಂದ್ರಗಳು ಇತ್ಯಾದಿಗಳಿಗೆ ಆದ್ಯತೆ ನೀಡಲಾಗುವುದು. ನಾಲ್ಕು ವರ್ಷಗಳಲ್ಲಿ ಕೇರಳವನ್ನು ಸಂಪೂರ್ಣ ತ್ಯಾಜ್ಯ ಮುಕ್ತವನ್ನಾಗಿಸುವ ಗುರಿ ಇದೆ. ಆಸ್ತಿ ನೋಂದಣಿ ಪ್ರಕಾರ ಮುಂದಿನ ವರ್ಷದಿಂದ ನಿರ್ವಹಣಾ ಅನುದಾನ ಮಂಜೂರು ಮಾಡಲಾಗುವುದು. ಹೆಚ್ಚು ಬಾಕಿ ಇರುವ ಕಡತಗಳಿರುವ ಪಂಚಾಯಿತಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ.  ಜಿಲ್ಲೆಯಲ್ಲಿ 777 ವಾರ್ಡನ್ ಹಾಗೂ 1322 ಹಸಿರು ಕ್ರಿಯಾಸೇನೆ ಸದಸ್ಯರಿದ್ದಾರೆ. ಕಸಗಳನ್ನು ಬಾಗಿಲಿನ ಹಂತದ ಸಂಗ್ರಹವನ್ನು ಸುವ್ಯವಸ್ಥಿತಗೊಳಿಸಬೇಕು. ಅಜೈವಿಕ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಬೇಕು. ಕಾರ್ಯಪಡೆಯನ್ನು ಸುವ್ಯವಸ್ಥಿತಗೊಳಿಸಬೇಕು. ಮತ್ತು ಹಸಿರು ಕ್ರಿಯಾಸೇನೆಗೆ ನೀಡಿದ ಬಳಕೆದಾರರ ಶುಲ್ಕವನ್ನು ಎಲ್ಲರೂ ಪಾವತಿಸಬೇಕು. ಇದರ ಮಹತ್ವವನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು. ಅಗತ್ಯವಿದ್ದರೆ ಕಾನೂನು ನೆರವು ನೀಡಲಾಗುವುದು ಎಂದು ತಿಳಿಸಿದರು.
       ಪಡನ್ನಕ್ಕಾಡ್ ಕೃಷಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ವಹಿಸಿದ್ದರು. ಚರ್ಚೆಗಳಿಗೆ ಸ್ಥಳೀಯಾಡಳಿತ ಇಲಾಖೆ ಗ್ರಾಮಾಂತರ ನಿರ್ದೇಶಕ ಎಚ್.ದಿನೇಶನ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಪ್ರತಿಕ್ರಿಯಿಸಿದರು.
         ಕಿನಾನೂರು ಕರಿಂದಳ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸಂಘದ ರಾಜ್ಯ ಸಮಿತಿ ಸದಸ್ಯ ಟಿ.ಕೆ.ರವಿ, ನೀಲೇಶ್ವರಂ ನಗರÀಸಭೆ ಅಧ್ಯಕ್ಷೆ ಟಿ.ವಿ.ಶಾಂತ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್, ದೇಲಂಪಾಡಿ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ.ಇ.ಪಿ.ಉμÁ, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಶ್ರೀಧರ ಮತ್ತು ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದಿರಿಯಾ ಕಾಞಂಗಾಡ್ ಮಾತನಾಡಿದರು. ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ವತ್ಸಲನ್, ಸ್ಥಳೀಯಾಡಳಿತ ಮತ್ತು ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ವಿ.ಪಿ.ಪಿ.ಮುಸ್ತಫಾ, ಸ್ಥಳೀಯಾಡಳಿತ  (ಗ್ರಾಮೀಣ) ನಿರ್ದೇಶಕರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಚ್.ದಿನೇಶನ್, ಹಿರಿಯ ಸ್ಥಳೀಯಾಡಳಿತ ಇಲಾಖೆ ರಾಜ್ಯ ಮುಖ್ಯಾಧಿಕಾರಿಗಳಾದ ಎಸ್.ಅಜಯಕುಮಾರ್, ಡಿ.ಸಾಜು, ಟಿ.ಸಜೀಶ್, ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ ಇತರರು ಇದ್ದರು. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಸ್ವಾಗತಿಸಿ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪ್ ವಂದಿಸಿದರು. ಹದಿನಾಲ್ಕು ಜಿಲ್ಲೆಗಳಲ್ಲೂ ಶನಿವಾರ ಈ ಕಾರ್ಯಕ್ರಮ ನಡೆದಿತ್ತು. ಕಾಸರಗೋಡು ಜಿಲ್ಲಾ ಮಟ್ಟದ ತರಬೇತಿಯೊಂದಿಗೆ  ನವಕೇರಳ ಸ್ಥಳೀಯಾಡಳಿತ  2.0 ಕಾರ್ಯನಿರ್ವಹಣೆಯ ಪರಿಶೀಲನೆಯನ್ನು ಪೂರ್ಣಗೊಳಿಸಲಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries