HEALTH TIPS

ದಕ್ಷಿಣ ಏಷ್ಯಾದ ಹಿತಾಸಕ್ತಿ ತಿಳಿಸಲು ಜಿ-20 ಅಧ್ಯಕ್ಷ ಸ್ಥಾನ ಬಳಕೆ: ಜೈಶಂಕರ್

 

             ನವದೆಹಲಿ: ದೇಶಕ್ಕೆ ಲಭಿಸಿರುವ ಜಿ-20 ಅಧ್ಯಕ್ಷೀಯ ಸ್ಥಾನವನ್ನು ದಕ್ಷಿಣ ಏಷ್ಯಾದ ಹಿತಾಸಕ್ತಿಗಳು ಹಾಗೂ ಆತಂಕಗಳನ್ನು ಜಗತ್ತಿನ ಮುಂದಿಡಲು ಭಾರತ ಬಳಸಿಕೊಳ್ಳಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಮಂಗಳವಾರ ಹೇಳಿದರು.

       ನಗರದಲ್ಲಿ ಆರಂಭವಾಗಿರುವ ಮೂರು ದಿನಗಳ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಮಾತನಾಡಿದ ಅವರು,'ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾಹಿತಿ ಎಲ್ಲಿ ಸಂಗ್ರಹವಾಗುತ್ತದೆ?

ಈ ಮಾಹಿತಿಯನ್ನು ಯಾರು ಹಾಗೂ ಯಾತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ಹೆಚ್ಚು ಅರಿತುಕೊಂಡಿದೆ' ಎಂದರು.

                    'ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ, ದೇಶದ ಪ್ರಗತಿಗೂ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಯೊಂದಿಗೆ ಸಂಬಂಧ ಇದೆ ಎಂದು ಸ್ಪಷ್ಟವಾಗುತ್ತದೆ. ಹೀಗಾಗಿ ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ದೇಶವು ಅಸ್ಪಷ್ಟ ನಿಲುವು ಹೊಂದುವುದು ಸಾಧ್ಯವಿಲ್ಲ' ಎಂದು ಅವರು ಪ್ರತಿಪಾದಿಸಿದರು.

                  'ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೆ ಹಾಗೂ ರಾಜಕೀಯ ನಿರ್ಧಾರಗಳಿಗೂ ಸಂಬಂಧ ಇದೆ. ಭಾರತವು ಜಾಗತಿಕವಾಗಿ ಮಹತ್ವದ ಪಾತ್ರ ವಹಿಸಲು ಹಾಗೂ ವಿವಿಧ ರಾಷ್ಟ್ರಗಳೊಂದಿಗೆ ಮೈತ್ರಿ ಸಾಧಿಸಲು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದೆ' ಎಂದರು.

               'ಒಂದು ದೇಶ ಆರ್ಥಿಕವಾಗಿ ಸದೃಢವಾಗಲು ತಂತ್ರಜ್ಞಾನ ಅಗತ್ಯ. ಇದೇ ಕಾರಣಕ್ಕೆ ಜಗತ್ತಿನ ಬೃಹತ್‌ ರಾಷ್ಟ್ರಗಳು ತಾಂತ್ರಿಕವಾಗಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸತತ ಪ್ರಯತ್ನದಲ್ಲಿರುತ್ತವೆ' ಎಂದು ವಿಶ್ಲೇಷಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries