ಬಾಲಿ: ಜಿ20 ಶೃಂಗಸಭೆಗಾಗಿ ಬಾಲಿಗೆ ಆಗಮಿಸಿದ್ದ ರಷ್ಯಾ ವಿದೇಶಾಂಗ ಸಚಿವರಿಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಚಿವ ಸೆರ್ಗೆ ಲಾವ್ರೊವ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿರಬಹುದು ಎಂದು ಶಂಕಿಸಲಾಗಿದೆ.
ಈ ಮಾಹಿತಿಯನ್ನು ಇಂಡೋನೇಷ್ಯಾದ ಅಧಿಕಾರಿಗಳು ದೃಢಪಡಿಸಿದ್ದು, ರಷ್ಯಾದ ಸಚಿವರಿಗೆ ದ್ವೀಪ ರಾಷ್ಟ್ರದ ರೆಸಾರ್ಟ್ ನಲ್ಲಿ ಇಂಡೋನೇಶ್ಯಾ ಸರ್ಕಾರದ ಮೂವರು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾರೊಬ್ಬರೂ ತಮ್ಮ ಗುರುತು ಬಹಿರಂಗಪಡಿಸಲು ಅಥವಾ ಸಾರ್ವಜನಿಕವಾಗಿ ಈ ವಿಷಯವನ್ನು ಚರ್ಚಿಸಲು ನಿರಾಕರಿಸಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಲಾವ್ರೊವ್ ಅವರಿಗೆ ಹೃದಯ ಸಂಬಂಧಿತ ಚಿಕಿತ್ಸೆ ಕೊಡಿಸಲಾಗುತ್ತಿದೆ, ಅಲ್ಲಿನ ರಷ್ಯಾ ರಾಯಭಾರ ಕಚೇರಿ ಅಧಿಕಾರಿಗಳು ತಕ್ಷಣದ ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ.