ನವದೆಹಲಿ:ಭಾರತದ ಜಿ 20ಯ ಅಧ್ಯಕ್ಷತೆಯ ಲಾಂಛನ(emblem), ವಿಷಯ ಹಾಗೂ ವೆಬ್ಸೈಟ್ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಮಂಗಳವಾರ ಬಿಡುಗಡೆಗೊಳಿಸಲಿದ್ದಾರೆ. ದೇಶಾದ್ಯಂತ ಹಲವು ಸ್ಥಳಗಳಲ್ಲಿ 32 ವಿಭಿನ್ನ ಸೆಕ್ಟರ್ಗಳಲ್ಲಿ 200ಕ್ಕೂ ಅಧಿಕ ಸಭೆಗಳನ್ನು ನಡೆಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಅಧ್ಯಕ್ಷತೆಯ ವಿವರಗಳನ್ನು ಸಂಜೆ 4.30ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅನಾವರಣಗೊಳಿಸಲಿದ್ದಾರೆ.