ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತದ 'ಜಿ-20' ಅಧ್ಯಕ್ಷತೆ ಕುರಿತಾದ ಲಾಂಛನ, ಥೀಮ್ ಹಾಗೂ ವೆಬ್‌ಸೈಟ್ ಅನಾವರಣಗೊಳಿಸಲಿದ್ದಾರೆ.
'ಜಿ-20 ಅಧ್ಯಕ್ಷತೆಯು ಜಾಗತಿಕ ಸಮಸ್ಯೆಗಳಿಗೆ ಕಡಿವಾಣ ಹಾಕಲು ಹಾಗೂ ಜಾಗತಿಕ ಕಾರ್ಯಸೂಚಿಗೆ ತನ್ನದೇ ಆದ ಕೊಡುಗೆ ನೀಡಲು ಭಾರತಕ್ಕೆ ದೊರೆತಿರುವ ಉತ್ತಮ ಅವಕಾಶವಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.
ಭಾರತವು ಡಿಸೆಂಬರ್ 1ರಂದು ಜಿ-20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ.
ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೊನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಈ ಗುಂಪಿನಲ್ಲಿವೆ. ಸದ್ಯ ಇಂಡೊನೇಷ್ಯಾ ಈ ಗುಂಪಿನ ಅಧ್ಯಕ್ಷತೆ ಹೊಂದಿದೆ.