ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.21, 22, 23ರಂದು ನಡೆಯಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ 61ನೇ ಶಾಲಾ ಕಲೋತ್ಸವದ ಪ್ರಚಾರಾರ್ಥವಾಗಿ ಡಂಗುರ ಮೆರವಣಿಗೆ ಶುಕ್ರವಾರ ಅಪರಾಹ್ನ ನಡೆಯಿತು.
ನಾರಂಪಾಡಿ ಪೇಟೆಯಿಂದ ಪ್ರಾರಂಭವಾದ ಮೆರವಣಿಗೆ ಮಾರ್ಪನಡ್ಕ ಪೇಟೆಯನ್ನು ಸುತ್ತಿ ಶಾಲಾ ವಠಾರದಲ್ಲಿ ಸಂಪನ್ನವಾಯಿತು. ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಶಾಲಾ ಅಧಿಕೃತರು, ಕಲೋತ್ಸವ ಸಂಘಟನಾ ಸಮಿತಿ ಪದಾಧಿಕಾರಿಗಳು, ವಿದ್ಯಾಭಿಮಾನಿಗಳು, ಊರವರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಮಾರ್ಪನಡ್ಕದಲ್ಲಿ ಸ್ಥಳೀಯರು ಹಾಗೂ ಸಂಘಸಂಸ್ಥೆಗಳ ವತಿಯಿಂದ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಚೆಂಡೆಮೇಳ, ಮುತ್ತುಕೊಡೆ, ನಾಸಿಕ್ ಬ್ಯಾಂಡ್‍ಗೆ ಗೊಂಬೆಗಳು ಹಾಗೂ ಮಕ್ಕಳ ನರ್ತನ ಗಮನಸೆಳೆಯಿತು.
61ನೇ ಶಾಲಾ ಕಲೋತ್ಸವ :
ಕುಂಬಳೆ ಉಪಜಿಲ್ಲಾಮಟ್ಟದ 61ನೇ ಶಾಲಾ ಕಲೋತ್ಸವದ ವೇದಿಕೆಯೇತರ ಸ್ಪಧೆರ್Éಗಳು ನ.14 ಮತ್ತು 15ರಂದು ನಡೆದಿತ್ತು. ನ.21ರಂದು 11 ವೇದಿಕೆಗಳಲ್ಲಾಗಿ 41 ವಿಭಾಗ, 22ರಂದು 11 ವೇದಿಕೆಗಳಲ್ಲಿ 58 ವಿಭಾಗ, 23ರಂದು ಹತ್ತು ವೇದಿಕೆಗಳಲ್ಲಾಗಿ 59 ವಿಭಾಗದ ಸ್ಪರ್ಧೆಗಳು ನಡೆಯಲಿದೆ.