ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನ. 22ರಿಂದ 25ರವರೆಗೆ ಮಿಯಪದವು ಶ್ರೀವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
22ರಂದು ರಂಗೇತರ ಕಾರ್ಯಕ್ರಮಗಳು ಹಾಗೂ 23ರಿಂದ 25ರವರೆಗೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳು ಕಾಲಮಿತಿಗೊಳಪಟ್ಟು ನಡೆಯಲಿದೆ. 23ರಂದು ಬೆಳಗ್ಗೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿದ್ದಾರೆ. 25ರಂದು ಸಮಾರೋಪ ಸಮಾರಂಭವನ್ನು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಮೀನಾ ಟೀಚರ್ ಉದ್ಘಾಟಿಸುವರು.
ಉಪಜಿಲ್ಲೆಯ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿರುವ ಈ ಕಾರ್ಯಕ್ರಮದಲ್ಲಿ ಆಗಮಿಸುವ ಪ್ರತಿಯೊಬ್ಬ ಕಲಾಪ್ರೇಮಿಗಳಿಗೂ ಆಹಾರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾರ್ಯಕ್ರಮವನ್ನು ಮಿಯಾಪದವು ಉತ್ಸವವನ್ನಾಗಿ ಮಾಡಲು ವಿಸ್ತಾರವಾದ ಸಂಘಟನಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಸಂಘಟನಾ ಸಮಿತಿ ಸದಸ್ಯೆ ಹಾಗೂ ಮೀಂಜ ಪಂಚಾಯಿತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಮಂಜೇಶ್ವರ ಎಇಒ. ದಿನೇಶ್ ವಿ, ಪ್ರಧಾನ ಸಂಚಾಲಕ ಶಿವಶಂಕರ ಬಿ, ಸಹ ಸಂಚಾಲಕ ಡಿ.ಎಸ್. ಅರವಿಂದಾಕ್ಷ ಭಂಡಾರಿ, ಪ್ರಚಾರ ಸಂಚಾಲಕ ಹರೀಶ್ ಸುಳ್ಯಮೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಂಜೇಶ್ವರ ಉಪಜಿಲಾ ಶಾಲಾ ಕಲೋತ್ಸವ ನ. 22 ರಿಂದ ಮೀಯಪದವಲ್ಲಿ: ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧಿಕೃತರು
0
ನವೆಂಬರ್ 17, 2022