ಪತ್ತನಾಪುರ: ನಾಗರಿಕ ಸರಬರಾಜು ಇಲಾಖೆಯ ಸಾರ್ವಜನಿಕ ವಿತರಣಾ ಕೇಂದ್ರದ (ಪಿಡಿಎಸ್) ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಮೂಟೆಗಳು ನೀರಿನಿಂದ ನಾಶವಾಗಿವೆ.
ಕುನ್ನಿಕೋಡಿನ ಶಾಸ್ತ್ರಿ ಜಂಕ್ಷನ್ ಬಳಿಯಿರುವ ಭಾರತೀಯ ಆಹಾರ ನಿಗಮದ ಅವನೀಶ್ವರಂ ಗೋದಾಮಿಗೆ ಹೊಂದಿಕೊಂಡಿರುವ ಪಿಡಿಎಸ್ ಕೇಂದ್ರದಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿ ನಾಶವಾಗಿದೆ.
ಸಂಗ್ರಹಿಸಲಾಗಿದ್ದ 50 ಮೂಟೆಯಲ್ಲಿದ್ದ ಇನ್ನೂರ ಮೂವತ್ತು ಕಿಲೋಗೂ ಹೆಚ್ಚು ಅಕ್ಕಿ ನಾಶವಾಗಿದೆ ಎಂದು ವರದಿಯಾಗಿದೆ. ಮೂಟೆಗಳನ್ನು ಪೇರಿಸಿದ್ದ ನೆಲದಿಂದ ತೇವಾಂಶವಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ.
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಖಾಸಗಿಯವರ ಒಡೆತನದಲ್ಲಿರುವ ಕಟ್ಟಡದ ಒಂದು ಭಾಗದಲ್ಲಿ ಚರಂಡಿ ಇದ್ದು, ಅಲ್ಲಿಂದ ತೇವಾಂಶದಿಂದ ಅಕ್ಕಿ ಹಾಳಾಗಲು ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಅವನೇಶ್ವರಂನ ಮುಖ್ಯ ಗೋದಾಮಿನಿಂದ ಮನೆ-ಮನೆಗೆ ವಿತರಿಸಲು ಅಕ್ಕಿ ಮೂಟೆಗಳನ್ನು ಇಲ್ಲಿಗೆ ತರಲಾಗುತ್ತದೆ. ಪಡಿತರ ಅಂಗಡಿ ಮತ್ತಿತರ ಸಂಸ್ಥೆಗಳಿಗೆ ಇಲ್ಲಿಂದ ಅಕ್ಕಿ, ಗೋಧಿ ವಿತರಣೆ ನಡೆಯುತ್ತದೆ.
ಕೊಲ್ಲಂನ ಕ್ವಾಲಿಟಿ ಕಂಟ್ರೋಲರ್ ಶ್ರೀಜಿತ್ ನೇತೃತ್ವದ ತಂಡವು ಕುನ್ನಿಕೋಡ್ ಪಿಡಿಎಸ್ ಗೋದಾಮಿನಲ್ಲಿ ಅಕ್ಕಿ ಮೂಟೆಗಳಲ್ಲಿ ತೇವಾಂಶವನ್ನು ಕಂಡು ಸ್ಥಳಕ್ಕೆ ತಲುಪಿದ್ದಾರೆ. ಕಂದಾಯ ಇಲಾಖೆ ಹಾಗೂ ನಾಗರಿಕ ಸರಬರಾಜು ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ. ಅಕ್ಕಿ ಬಳಕೆಗೆ ಯೋಗ್ಯವಲ್ಲದ್ದರಿಂದ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ.
ವಿತರಣೆಗಿರಿಸಿದ್ದ ಅಕ್ಕಿ ಮೂಟೆಗಳಿಗೆ ನೀರು: 230 ಕೆಜಿಗೂ ಹೆಚ್ಚು ಅಕ್ಕಿ ವ್ಯರ್ಥ
0
ನವೆಂಬರ್ 14, 2022