ಕೊಚ್ಚಿ: ಸಹಪಾಠಿಯೊಬ್ಬರಿಂದ ಸಮ್ಮತಿಯ ಸಂಭೋಗದ ಮೂಲಕ ಗರ್ಭಿಣಿಯಾದ 23 ವರ್ಷದ ಸ್ತ್ರೀಗೆ 26 ವಾರಗಳ ನಂತರ ಶಸ್ತ್ರ ಚಿಕಿತ್ಸೆ ಮಾಡಿ ಭ್ರೂಣ ತೆಗೆಯಲು ಅನುಮತಿ ನೀಡಲಾಗಿದೆ.
ಈಕೆ ಎಂಬಿಎ ವಿದ್ಯಾರ್ಥಿನಿ. ಮಗುವಿಗೆ ಜನ್ಮ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಮಹಿಳೆಯ ಹಕ್ಕಿಗೆ ಯಾವುದೇ ನಿರ್ಬಂಧವಿಲ್ಲ, ಅದು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ನ್ಯಾಯಮೂರ್ತಿ ವಿಜಿ ಅರುಣ್ ಹೇಳಿದ್ದಾರೆ. ಗರ್ಭಚ್ಚಿದ್ರದ ಸಂದರ್ಭ ಮಗು ಜೀವಂತವಾಗಿದ್ದರೆ, ಆಸ್ಪತ್ರೆಯ ಅಧಿಕಾರಿಗಳು ಉತ್ತಮ ರಕ್ಷಣೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅನಿಯಮಿತ ಪಿರಿಯಡ್ಸ್ ಆಗಿದ್ದ ವಿದ್ಯಾರ್ಥಿನಿಗೆ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಬಳಿಕ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ಮಾಹಿತಿ ತಿಳಿದ ಬಳಿಕ ಆಕೆ ತೀವ್ರ ಒತ್ತಡಕ್ಕೆ ಒಳಗಾಗಿದ್ದಳು. ಸಹಪಾಠಿಯೊಬ್ಬರು ಸಮ್ಮತಿಯ ಸಂಭೋಗ ನಡೆಸಿರುವುದಾಗಿ ಆಕೆ ತಿಳಿಸಿದ್ದಾಳೆ. ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದು ತನ್ನ ಮುಂದಿನ ಅಧ್ಯಯನ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಮನವಿ ಮಾಡಿದ್ದಳು.
26 ವಾರಗಳ ನಂತರ ಗರ್ಭಪಾತಕ್ಕೆ ಕಾನೂನು ತಡೆ ಇರುವುದರಿಂದ ಆಸ್ಪತ್ರೆಗಳು ಇದಕ್ಕೆ ಸಿದ್ಧರಿರಲಿಲ್ಲ. ನಂತರ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾದ ವೈದ್ಯಕೀಯ ಮಂಡಳಿಯು ಯಾವುದೇ ದೈಹಿಕ ಸಮಸ್ಯೆಗಳಿಲ್ಲದಿದ್ದರೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ನೀಡಿದೆ.
ಸಹಪಾಠಿಯಿಂದ ಗರ್ಭಿಣಿಯಾದ ವಿದ್ಯಾರ್ಥಿನಿ: 26 ವಾರಗಳ ನಂತರ ಭ್ರೂಣ ಹೊರತೆಗೆಯಲು ಹೈಕೋರ್ಟ್ ಅನುಮತಿ
0
ನವೆಂಬರ್ 05, 2022