ಪೆರ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ಲ ವಲಯದ ವಾಣಿನಗರ, ಕಜಂಪಾಡಿ, ಇಳಂತ್ತೋಡಿ, ಪೆರ್ಲ, ಧರ್ಮತ್ತಡ್ಕ, ಬೆದ್ರಂಪಳ್ಳ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಶ್ರೀಸತ್ಯನಾರಾಯಣ ಪೂಜೆ ಡಿ.27ರಂದು ಪೆರ್ಲದ ಭಾರತೀ ಸದನದಲ್ಲಿ ಜರಗಲಿದೆ. ಇದರ ಯಶಸ್ವಿಗಾಗಿ ವಲಯ ಪ್ರಮುಖ ಪ್ರತಿನಿಧಿಗಳ ಸಭೆ ಪೆರ್ಲ ವ್ಯಾಪಾರಿ ಭವನದಲ್ಲಿ ಜರಗಿತು. ಜನ ಜಾಗೃತಿ ವೇದಿಕೆಯ ಪೆರ್ಲ ವಲಯಾಧ್ಯಕ್ಷ ಬಿ.ಪಿ.ಶೇಣಿ ಸಭೆಯನ್ನು ಉದ್ಘಾಟಿಸಿದರು. ವಲಯ ಮೇಲ್ವಿಚಾರಕ ಶಿವಪ್ರಸಾದ್ ಪಿ. ಕಾರ್ಯಕ್ರಮದ ರೂಪುರೇಷೆ ನೀಡಿದರು. ಒಕ್ಕೂಟದ ಅಧ್ಯಕ್ಷರುಗಳಾದ ಸ್ವರ್ಣಲತಾ, ಟಿ.ಎಸ್.ಮೂಲ್ಯ, ವನಜ, ಕಮಲಾಕ್ಷಿ ಮಾತನಾಡಿದರು. ಸೇವಾ ಪ್ರತಿನಿಧಿ ಚಂದ್ರಾವತಿ ಸ್ವಾಗತಿಸಿ ಸುನಂದ ವಂದಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.
ಡಿ.27ಕ್ಕೆ ಪೆರ್ಲ ಭಾರತೀ ಸದನದಲ್ಲಿ ಧ.ಗ್ರಾ.ಯೋಜನೆಯ ಪದಗ್ರಹಣದಂಗವಾಗಿ ಪೂರ್ವಭಾವಿ ಸಭೆ
0
ನವೆಂಬರ್ 25, 2022
Tags