HEALTH TIPS

ಎಬಿಸಿಡಿ ಶಿಬಿರದಲ್ಲಿ 2923 ಸೇವೆಗಳ ಒದಗಣೆ: ಎರಡು ದಿನಗಳ ಶಿಬಿರದಲ್ಲಿ 1156 ಮಂದಿ ಭಾಗಿ


        ಬದಿಯಡ್ಕ: ಅಕ್ಷಯ ಬಿಗ್ ಕ್ಯಾಂಪೇನ್ ಫಾರ್ ಡಾಕ್ಯುಮೆಂಟ್ ಡಿಜಿಟಲೈಸೇಶನ್ (ಎಬಿಸಿಡಿ) ಶಿಬಿರ ಪರಿಶಿಷ್ಟ ಪಂಗಡದವರಿಗೆ ಅಧಿಕೃತ ದಾಖಲೆಗಳನ್ನು ಪ್ರವೇಶಿಸಲು ಮತ್ತು ಅವುಗಳನ್ನು ಡಿಜಿಟಲ್ ಲಾಕರ್‍ನಲ್ಲಿ ಸಂಗ್ರಹಿಸಲು ಅವಕಾಶವನ್ನು ಒದಗಿಸುವ ಯೋಜನೆಯಾಗಿದ್ದು, ಬದಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಶಿಬಿರ ಬುಧವಾರ ಮುಕ್ತಾಯಗೊಂಡಿತು. ಎರಡು ದಿನಗಳ ಶಿಬಿರದಲ್ಲಿ 1156 ಗ್ರಾಹಕರಿಗೆ 2923 ಸೇವೆಗಳನ್ನು ಒದಗಿಸಲಾಗಿದೆ. ಶಿಬಿರದ ಸಮನ್ವಯದ ಉಸ್ತುವಾರಿಯನ್ನು ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್ ವಹಿಸಿದ್ದರು. ಎರಡು ದಿನದಲ್ಲಿ 517 ಪಡಿತರ ಚೀಟಿ, 592 ಆಧಾರ್, 223 ಚುನಾವಣಾ ಗುರುತಿನ ಚೀಟಿ, 35 ಜನನ ಪ್ರಮಾಣ ಪತ್ರ, 225 ಬ್ಯಾಂಕ್ ಖಾತೆ, 271 ಆರೋಗ್ಯ ವಿಮೆ, 23 ವಯಸ್ಸಿನ ದಾಖಲೆ, 101 ಆದಾಯ ಪ್ರಮಾಣ ಪತ್ರ ಹಾಗೂ 849 ಡಿಜಿ ಲಾಕರ್ ಸೌಲಭ್ಯ ಒದಗಿಸಲಾಗಿದೆ.
     ಎಬಿಸಿಡಿ(ಅಕ್ಷಯ ಬಿಗ್ ಕ್ಯಾಂಪೇನ್ ಫಾರ್ ಡಾಕ್ಯುಮೆಂಟ್ ಡಿಜಿಟಲೈಸೇಶನ್) ಎಂಬುದು ಪರಿಶಿಷ್ಟ ಪಂಗಡಗಳಿಗೆ ಮೂಲ ಅಧಿಕೃತ ದಾಖಲೆಗಳನ್ನು ಭದ್ರಪಡಿಸಲು, ಅವುಗಳನ್ನು ಡಿಜಿಟಲ್ ಲಾಕರ್‍ಗಳಲ್ಲಿ ಸಂಗ್ರಹಿಸಲು ಮತ್ತು ದಾಖಲೆಗಳಿಲ್ಲದವರಿಗೆ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾದ ಯೋಜನೆಯಾಗಿದೆ. ಜಿಲ್ಲೆಯ ಕಿನಾನೂರು ಕರಿಂದಳ ಪಂಚಾಯಿತಿಯಲ್ಲಿ ಈ ಯೋಜನೆಗೆ ಮೊದಲು ಚಾಲನೆ ನೀಡಲಾಗಿತ್ತು. ಎರಡನೇ ಹಂತದಲ್ಲಿ ಬದಿಯಡ್ಕ  ಪಂಚಾಯತಿಯಲ್ಲಿ ಆಯೋಜಿಸಲಾಗಿತ್ತು. ಮುಂದಿನ ಶಿಬಿರವು ಡಿ.15ರಂದು ಕೋಡೋಂ ಬೆಳ್ಳೂರು ಪಂಚಾಯತಿಯಲ್ಲಿ ನಡೆಯಲಿದೆ ಎಂದು ಅಕ್ಷಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಎಸ್.ನಿವೇದ್ ತಿಳಿಸಿರುವರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries