HEALTH TIPS

ಬದಿಯಡ್ಕದ ಡಾ.ಕೃಷ್ಣಮೂರ್ತಿಗಳ ಬಲಿದಾನ-ಹೇಳುವುದೇನು?:ಭಾಗ-2


         ಕಾಸರಗೋಡು: ಬದಿಯಡ್ಕದ ಜನಪರ ದಂತವೈದ್ಯ ಡಾ.ಕೃಷ್ಣಮೂರ್ತಿಯವರ ಸ್ವ-ಆತ್ಮಾಹುತಿ ಘಟನೆ ಬಗೆಗಿನ ಪ್ರಕರಣದ ದುರೂಹತೆ ಇನ್ನೂ ಮುಂದುವರಿದಿದೆ.  ಬದಿಯಡ್ಕ ಪರಿಸರ ವ್ಯಾಪ್ತಿಯಲ್ಲಿ, ವೈದ್ಯರ ಅಚ್ಚರಿಯ ಸ್ಥಳದಿಂದ ಮರೆಯಾಗುವ ನಿರ್ಧಾರ, ನಾಪತ್ತೆ ಪ್ರಕರಣ, ಬಳಿಕ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನಾವಳಿಗಳ ಬಗೆಗೆ ವೇದನಕರ ವಿಚಾರಗಳು ಕೇಳಿಬರುತ್ತಿದೆ. ಮುಖ್ಯವಾಗಿ ವೈದ್ಯರು ಸೇವೆ ನೀಡುತ್ತಿದ್ದ ದಾವಾಖಾನೆ ಬದಿಯಡ್ಕ ಪೇಟೆಯ ಹೃದಯ ಭಾಗದ ಆಯಕಟ್ಟಿನ ಸ್ಥಳದಲ್ಲಿರುವುದು. ಈ ಸ್ಥಳವನ್ನು ಹೇಗಾದರೂ ವಶಪಡಿಸುವ ನಿಟ್ಟಿನಲ್ಲಿ ಕೆಲವು ಕಾಲಗಳಿಂದ ತೆರೆಮರೆಯ ಯತ್ನಗಳು ಒಂದು ಸಮುದಾಯದಿಂದ ನಡೆಯುತ್ತಿತ್ತೆಂದು ತಿಳಿದುಬಂದಿದೆ. ಯಾಕೆಂದರೆ ಅವರೊಬ್ಬ ಹಿಂದೂವಾಗಿದ್ದರು.
      ಹೌದು, ಕಾಸರಗೋಡಿನ ನಗರ ಪ್ರದೇಶದ ಬಹುತೇಕ ಅಥವಾ ಶೇ.85 ಪ್ರದೇಶಗಳೂ ಇಂದೀಗ ಮುಸ್ಲಿಂ ಸಮುದಾಯದ ಕೈವಶವಾಗಿದೆ. ಕಾಸರಗೋಡುನಗರ, ಮೇಲ್ಪರಂಬ, ಬೇಕಲ, ಬೋವಿಕ್ಕಾನ, ಚೆರ್ಕಳ, ಬದಿಯಡ್ಕ, ಸೀತಾಂಗೋಳಿ, ಕುಂಬಳೆ, ಮೊಗ್ರಾಲ್, ಚೂರಿ, ಉಳಿಯತ್ತಡ್ಕ, ಬಂದ್ಯೋಡು, ಉಪ್ಪಳ, ಕೈಕಂಬ, ಹೊಸಂಗಡಿ, ಮಂಜೇಶ್ವರ(ರಾ.ಹೆದ್ದಾರಿ-ಗೋವಿಂದ ಪೈ ಕಾಲೇಜು ಪರಿಸರ), ಪೊಸೋಟು, ಉದ್ಯಾವರ ಮೊದಲಾದ ಪ್ರದೇಶಗಳ ಬಹುತೇಕ ನಿವೇಶನಗಳನ್ನು ಈಗಾಗಲೇ ಖರೀದಿಸಿಯಾಗಿದೆ. ಅದರಿಂದ ಅಲ್ಲೆಲ್ಲ ವ್ಯಾಪಾರ-ವಹಿವಾಟುಗಳೂ ವ್ಯಾಪಕ ಪ್ರಮಾಣದಲ್ಲಿ ಬೆಳೆದಿದೆ. ಅಭಿವೃದ್ದಿಯಾಗಿರುವುದೂ ಹೌದು. ಅದನ್ನು ಅಲ್ಲಗೆಳೆಯುವಂತೆಯೇ ಇಲ್ಲ. ಹಾಗೆಂದು ಅಷ್ಟೇ ಆಗಿದ್ದರೆ ಉತ್ತಮವಾಗಿರುತ್ತಿತ್ತೇನೊ. ಆದರೆ, ಅಂತಹ ಬೆಳವಣಿಗೆಯ ಬೆನ್ನಿಗೇ, ಬಳಿಕ ಅಲ್ಲೆಲ್ಲ ಇತರರಿಗೆ ನೆಮ್ಮದಿಯಿಂದ ಬದುಕಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಗಮನಾರ್ಹ. ಸದಾ ಗುಲ್ಲು-ಗದ್ದಲ, ಗಲಾಟೆಗಳು ಸರ್ವೇಸಾಮಾನ್ಯವಾಗುತ್ತದೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತುಗಳ ಬೃಹತ್ ಜಾಲವನ್ನು ಅವರು ಹಬ್ಬಿಸಿದ್ದು, ವ್ಯಾಪಕ ಅತಿಕ್ರಮಗಳು ಉದ್ಬವವಾಗಿದೆ. ಸಂಜೆ 6ರ ಬಳಿಕವಂತೂ ಹಲವೆಡೆ ಹಾದಿತಪ್ಪಿದ ಯುವ ಸಮೂಹದ ಹದ್ದುಮೀರಿದ ದುರ್ವತನೆಗಳಿಂದ ಭೀತಿ ಸೃಷ್ಟಿಯಾಗಿದೆ. ಬಹುಷಃ ಆರಕ್ಷಕರೂ ಭೀತಿಗೊಳಗಾಗಿರುವುದರಿಂದ ಅವರೂ ಹಲವು ಸಂದರ್ಭಗಳಲ್ಲಿ ಮೌನವಾಗಿಯೇ ಇರಲುಬಯಸುತ್ತಾರೆ.
     ದುಪ್ಪಟ್ಟು, ಮೂರುಪಟ್ಟು ಬೆಲೆಗೆ ಭೂಮಿ ಖರೀದಿಸುವ ದೊಡ್ಡ ಜಾಲವೇ ಜಿಲ್ಲೆಯಾದ್ಯಂತ ಕಾರ್ಯವೆಸಗುತ್ತಿದೆ. ಅದಕ್ಕಾಗಿ ಗಲ್ಪ್ ರಾಷ್ಟ್ರಗಳಿಂದ ವಿವಿಧ ಟ್ರಸ್ಟ್ ಗಳ ಹೆಸರಲ್ಲಿ ಕೋಟ್ಯಂತರ ರೂ. ಚಾರಿಟಿಯ ಹೆಸರಲ್ಲಿ ಹರಿದುಬರುತ್ತಿರುವುದು ಗೌಪ್ಯವೇನೂ ಅಲ್ಲ. ಮೇಲ್ನೋಟಕ್ಕೆ ಸೇವೆಯ ಸೋಗಿನಲ್ಲಿದ್ದರೂ ಅದರೊಳಗೆ ಪ್ರವಹಿಸುತ್ತಿರುವುದು ಮತಾಂಧತೆಯ ಸೀಳು ಚಿಂತನೆಗಳೆಂಬುದು ನಿರ್ವಿವಾದ. ವ್ಯಾಪಾರ-ವ್ಯವಹಾರಗಳ ಹೆಸರಲ್ಲಿ ಅವುಗಳೆಲ್ಲ ಮುನ್ನಡೆಯುತ್ತವೆಯಾದರೂ ಕೊನೆಗದು ತಲಪುವುದು ಮತ ಮತ್ತು ಅವರ ಅವಕಾಶಗಳತ್ತ. ಯಾಕೆಂದರೆ ಇತರರೆಲ್ಲ ಹಿಂದೂಗಳು.
      ಬದಿಯಡ್ಕ ಪೇಟೆಯಲ್ಲಿ ಈಗಾಗಲೇ ಇಂತಹ ಹಲವು ಯತ್ನಗಳು ನಡೆದಿವೆ. ಇಲ್ಲಿಯ ಖ್ಯಾತ ನೇತ್ರತಜ್ಞರ ಆಸ್ಪತ್ರೆಯನ್ನು ವರ್ಷಗಳ ಹಿಂದೆ ಇದೇ ರೀತಿ ಹೆದರಿಸಿ-ಬೆದರಿಸಿ ವಶಪಡಿಸುವ ಯತ್ನ ನಡೆದಿತ್ತು. ಅನುಭವಿಗಳಾದ ಆ ವೈದ್ಯರು, ತಮ್ಮ ವೈದ್ಯಕೀಯ ಸೇವೆಯನ್ನಷ್ಟೇ ಕೈಬಿಟ್ಟರೇ ಹೊರತು, ಭೂಮಿಯನ್ನು ಕೊಡುವ ಚಿಂತನೆಯೇ ಮಾಡದಿರುವುದು ಭರವಸೆಯ ಛಾತಿಯ ದ್ಯೋತಕ. ಹೆಮ್ಮೆಯಿದೆ.
      ಭೂಮಿ ಖರೀದಿಸಿ ವ್ಯಾಪಾರ-ಉದ್ದಿಮೆ ಬೆಳೆಸುವುದರಲ್ಲಿ ತಪ್ಪಿಲ್ಲ. ಆದರೆ ಎಲ್ಲರಿಗೂ ಸಮಾನ ಅವಕಾಶಬೇಕೆಂಬುದನ್ನು ಆ ಸಮುದಾಯ ಬೇಗನೆ ಮರೆಯುತ್ತದೆ. ಬಳಿಕ ತಮ್ಮದೇ ಪಾರುಪತ್ಯದಲ್ಲಿ ಇತರರಿಗೆ ಉಸಿರಾಡಲೂ ಅವಕಾಶ ನೀಡದಿರುವುದಕ್ಕೆ ಹಲವು ಉದಾಹರಣೆಗಳಿವೆ. ಡಾ.ಕೃಷ್ಣಮೂರ್ತಿಯವರಲ್ಲೂ ಪರೋಕ್ಷವಾಗಿ ಹಲವು ತಿಂಗಳುಗಳಿಂದ ಅವರಿರುವ ನಿವೇಶನ ವಿಕ್ರಯಿಸಲು ವಿವಿಧ ನಮೂನೆಯ ಯತ್ನಗಳು ನಡೆದು, ಅವೆಲ್ಲ ಕೈಸೋತ ಬಳಿಕ ಮಹಿಳಾ ಪ್ರಕರಣ ಥಳುಕುಹಾಕಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ. ಮಂಗಳವಾರ ಮಧ್ಯಾಹ್ನ ವೇಳೆ ಮಹಿಳೆಯ ಪರವಾಗಿ ಆಗಮಿಸಿದ ಈಗಾಗಲೇ ಬಂಧಿತರಾಗಿರುವ ಐವರ ತಂಡ ವೈದ್ಯರನ್ನು ಇನ್ನಿಲ್ಲದಂತೆ ಬೆದರಿಸಿ, ಥಳಿಸಿರುವುದು ಎಫ್.ಐ.ಆರ್ ನಲ್ಲಿ ದಾಖಲಾಗಿದೆ. ಜೊತೆಗೆ 10 ಲಕ್ಷ ರೂ.ಗಳ ಬೇಡಿಕೆ ಇರಿಸಿದ್ದು ಹಲವು ಸಂಶಯಗಳಿಗೆ ಎಡೆಮಾಡಿದೆ. ಏನಾದರೂ ಬಿಡಿಸಿಕೊಳ್ಳಲಾಗದ ಕುಣಿಕೆಗೆ ವೈದ್ಯರನ್ನು ಸಿಲುಕಿಸುವುದು ಅವರ ಲಕ್ಷ್ಯವಾಗಿತ್ತೆಂಬುದು ನಿಜವಾಗುತ್ತದೆ. ಅಷ್ಟೊಂದು ದೊಡ್ಡಮೊತ್ತದ ಹಣ ನೀಡಲಾಗದೆ, ಗತ್ಯಂತರವಿಲ್ಲದೆ ವೈದ್ಯರು ತಮ್ಮ ಸ್ಥಳವನ್ನು ಜುಜುಬಿ ಬೆಲೆಗೆ ನೀಡಿ ದಾರಿಗೆ ಬಂದಾರೆಂದು ಖದೀಮ ವರ್ಗ ಬಲವಾಗಿ ನಂಬಿತ್ತು. ಯಾಕೆಂದರೆ ವೈದ್ಯರು ಬ್ರಾಹ್ಮಣರು, ಮೇಲಾಗಿ ಹಿಂದು.
    ನಿಮಗೆ ಗೊತ್ತಿರಲಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಝೀರೋ ಲ್ಯಾಂಡ್ ಅಡಿಯಲ್ಲಿ ನೀರ್ಚಾಲು ಪರಿಸರದ ಪ್ರದೇಶವೊಂದರಲ್ಲಿ ನೀಡಿರುವ ಹಕ್ಕುಪತ್ರದ ಪ್ರದೇಶದಲ್ಲಿ 15 ಮುಸ್ಲಿಂ ಕುಟುಂಬಗಳಿರುವಲ್ಲಿ ಕೇವಲ ಒಂದು ಹಿಂದೂ ಕುಟುಂಬಕ್ಕೆ, ಎರಡು ಕ್ರೈಸ್ತ ಕುಟುಂಬಕ್ಕೆ ಹಕ್ಕುಪತ್ರ ನೀಡಿದೆ. ಇದಾಗಿ ಮೂರರಿಂದ ಐದು ತಿಂಗಳಲ್ಲಿ ಅಲ್ಲೊಂದು ಆರಾಧನಾಲಯ ನಿರ್ಮಾಣ ಯತ್ನವೂ ನಡೆದಿತ್ತು. ಆದರೆ ಸಕಾಲಿಕ ಕಾರ್ಯಾಚರಣೆಯಿಂದ ಅಂತಹದೊಂದು ಆಋಆಧನಾಲಯ ನಿರ್ಮಾಣಕ್ಕೆ ತಾತ್ಕಾಲಿಕ ನಿಯಂತ್ರಣ(ಸ್ಟೇ) ನೀಡಲಾಗಿದೆ. ಹಾಗಿದ್ದರೆ ಆ ವರ್ಗದ ಮನೋಸ್ಥಿತಿ, ಲಕ್ಷ್ಯಗಳೇನು ಎಂಬುದು ಭೀತಿಗೊಳಿಸುತ್ತದೆ.
        ಇಂತಹ ಹಲವು ಕಾರಣಗಳಿಂದಲೇ ಮೂರು ದಶಕಗಳಿಂದ ಜಿಲ್ಲೆಯಾದ್ಯಂತದಿಂದ ಹಲವು ಕುಟುಂಬಗಳು ಪಕ್ಕದ ಕರ್ನಾಟಕದತ್ತ ವಲಸೆ ಹೋಗಿವೆ.ಈಗಲೂ ನಡೆಯುತ್ತಿದೆ. ಯಾಕೆಂದರೆ ವಲಸೆ ಹೋದವರೆಲ್ಲ ಹಿಂದೂಗಳು.



                                 ನಾಳೆಗೆ ಮುಂದುವರಿಯುವುದು……..


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries