ಚಂಡೀಗಢ: ಪಂಜಾಬ್‌ನ ಗೌರ್‌ದಾಸ್‌ಪುರ ಜಿಲ್ಲೆಯ ಕಸ್ಸೋವಾಲ್‌ನ ಭಾರತ ಹಾಗೂ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ 2 ಡ್ರೋನ್‌ಗಳು ಶನಿವಾರ ರಾತ್ರಿ ಹಾರಾಟ ನಡೆಸಿದ್ದು, ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದ ಮೇಲೆ ಅವು ಪಾಕಿಸ್ತಾನಕ್ಕೆ ಹಿಂದಿರುಗಿವೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಮೇಲೆ ಕನಿಷ್ಠ 96 ಸುತ್ತು ಗುಂಡಿನ ಹಾರಿಸಿದ್ದು, ಇಲ್ಯುಮಿನೇಷನ್ ಬಾಂಬ್‌ಗಳನ್ನೂ ಬಳಸಿದ್ದಾರೆ. ಡ್ರೋನ್ ಕುರಿತ ತನಿಖೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮೃತಸರ ಜಿಲ್ಲೆಯ ಚನ್ನಾ ಪಟಾನ್ ಪ್ರದೇಶದಲ್ಲಿ ಶನಿವಾರ ರಾತ್ರಿ 11.46 ಕ್ಕೆ ಮತ್ತೊಂದು ಡ್ರೋನ್ ಪತ್ತೆಯಾಗಿದ್ದು, ಅದರ ಮೇಲೆ 10 ಸುತ್ತು ಗುಂಡು ಹಾರಿಸಿದ ನಂತರ ಡ್ರೋನ್ ಹಿಂತಿರುಗಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.