ಕಾಸರಗೋಡು: ವಿಶ್ವ ವಿಕಲಚೇತನರ ದಿನದ ಅಂಗವಾಗಿ ಜಿಲ್ಲೆಯಲ್ಲಿ ವಿಕಲಚೇತನರಿಗಾಗಿ ಜಿಲ್ಲಾಡಳಿತ, ಕೇರಳ ಸಾಮಾಜಿಕ ಭದ್ರತಾ ಮಿಷನ್ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಯುಡಿಐಡಿ ಪ್ರಮಾಣೀಕರಣ ಶಿಬಿರವನ್ನು ನಡೆಸಲಿದೆ. ಡಿಸೆಂಬರ್ 2 ರಂದು ಕಾಸರಗೋಡಿನ ಚೆರ್ಕಳ ಮಾರ್ಥೋಮ ಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ ಮುಂಗಡ ಬುಕ್ ಮಾಡಿದ 200 ಅಭ್ಯರ್ಥಿಗಳಿಗೆ ಮಾತ್ರ ಸ್ಕ್ರೀನಿಂಗ್‍ನಲ್ಲಿ ಭಾಗವಹಿಸುವ ಅವಕಾಶ ಇರಲಿದೆ. ಇದುವರೆಗೂ ವಿಕಲಚೇತನರ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯದವರು, ಅವಧಿ ಮುಗಿದ ನಂತರ ತಮ್ಮ ಪ್ರಮಾಣಪತ್ರವನ್ನು ನವೀಕರಿಸಲು ಕಾಯುತ್ತಿರುವವರು ಈ ಅವಕಾಶ ಪಡೆದುಕೊಳ್ಳಬಹುದಾಗಿದೆ.
ಅರ್ಜಿದಾರರು ಜಿಲ್ಲೆಯ ನಿವಾಸಿಗಳಾಗಿದ್ದು ಯು ಡಿ ಐ ಡಿ ವೈದ್ಯಕೀಯ ಮಂಡಳಿಯ ಪ್ರಮಾಣಪತ್ರಕ್ಕಾಗಿ ಯು ಡಿ ಐ ಡಿ ಪೆÇೀರ್ಟಲ್‍ನ ಆನ್‍ಲೈನ್ ನಲ್ಲಿ ನೋಂದಾಯಿಸಿದವರಾಗಿರಬೇಕು. ಪ್ರಸಕ್ತ ಯುಡಿಐಡಿ ಕಾರ್ಡ್ ಹೊಂದಿರುವವರು ಭಾಗವಹಿಸಬೇಕಾಗಿಲ್ಲ. ಪ್ರಮಾಣ ಪತ್ರ ಇಲ್ಲದವರು, ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಮಾತ್ರ ನೊಂದಣಿ ಮಾಡಬೇಕು ಎಂದು ಕೇರಳ ಸಾಮಾಜಿಕ ಭದ್ರತಾ ಮಿಷನ್ ಜಿಲ್ಲಾ ಸಂಯೋಜಕರು ಮಾಹಿತಿ ನೀಡಿದ್ದಾರೆ.