ತಿರುವನಂತಪುರ: ಡಿಸೆಂಬರ್ 3 ರಿಂದ 6ರವರೆಗೆ ತಿರುವನಂತಪುರಂನಲ್ಲಿ ನಡೆಯಲಿರುವ 64ನೇ ರಾಜ್ಯ ಶಾಲಾ ಕ್ರೀಡಾಕೂಟದ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವಂಕುಟ್ಟಿ ಅವರು, ಮಕ್ಕಳ ಕ್ರೀಡಾ ಬೆಳವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇತರ ವಿಷಯಗಳಂತೆ ಕ್ರೀಡಾ ಶಿಕ್ಷಣವೂ ಮುಖ್ಯವಾಗಿದೆ ಎಂದು ಹೇಳಿದರು. ಕ್ರೀಡಾ ಸ್ಪರ್ಧೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದರು.
ತಿರುವನಂತಪುರಂನ ಚಂದ್ರಶೇಖರನ್ ನಾಯರ್ ಸ್ಟೇಡಿಯಂ ಮತ್ತು ಯೂನಿವರ್ಸಿಟಿ ಸ್ಟೇಡಿಯಂನಲ್ಲಿ ಕ್ರೀಡೋತ್ಸವ ನಡೆಯಲಿದೆ. 98 ಕ್ರೀಡೆಗಳಲ್ಲಿ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ (ಬಾಲಕಿ/ಬಾಲಕÀ) ವಿಭಾಗಗಳಲ್ಲಿ ಸುಮಾರು 2000 ಕ್ರೀಡಾ ಪಟುಗಳು ಎರಡು ವರ್ಷಗಳ ನಂತರ ಕ್ರೀಡಾ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ. ಜೀವನ್ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಉಪನಿರ್ದೇಶಕ ವಾಸು ಸಿ.ಕೆ, ತಿರುವನಂತಪುರ ಡಿಎಂಒ (ಆರೋಗ್ಯ) ರಶ್ಮಿ. ಎಸ್, ಎಸಿಪಿ ಪ್ರತಾಪನ್ ನಾಯರ್, ತಿರುವನಂತಪುರಂ ಎಸ್‍ಸಿಇಆರ್‍ಟಿ ನಿರ್ದೇಶಕ ಡಾ. ಜಯಪ್ರಕಾಶ್, ಶಾಲಾ ಕೇರಳ ಉಪಾಧ್ಯಕ್ಷ ಡಾ. ಪ್ರಮೋದ್, ಎಸ್‍ಐಎಂಸಿ ನಿರ್ದೇಶಕ ಜಾನ್ಸಿ ವರ್ಗೀಸ್ ಮತ್ತು ವಿಎಚ್‍ಎಸ್‍ಸಿ ಉಪನಿರ್ದೇಶಕ (ಜನರಲ್) ಮಿನಿ ಇಆರ್ ಮಾತನಾಡಿದರು.
ತಿರುವನಂತಪುರದಲ್ಲಿ ಡಿಸೆಂಬರ್ 3 ರಿಂದ 6 ರವರೆಗೆ ರಾಜ್ಯ ಶಾಲಾ ಕ್ರೀಡೋತ್ಸವ; ಸಂಘಟನಾ ಸಮಿತಿ ರಚನೆ
0
ನವೆಂಬರ್ 03, 2022