ತಿರುವನಂತಪುರ: ಮಧ್ಯಾಹ್ನದ ಊಟದ ಮೆನುವಿನಲ್ಲಿ ವಿಷಮುಕ್ತ ತರಕಾರಿಗಳನ್ನು ಸೇರಿಸುವ ಯೋಜನೆ ಇದೆ ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ತಿಳಿಸಿದರು.
ಇದರ ಅಂಗವಾಗಿ ನವೆಂಬರ್ 30ರೊಳಗೆ ಪ್ರತಿ ಶಾಲೆಯಲ್ಲಿ ತರಕಾರಿ ತೋಟಗಳನ್ನು ನಿರ್ಮಿಸಬೇಕು ಎಂದು ಶಿವಂಕುಟ್ಟಿ ನಿರ್ದೇಶನ ನೀಡಿರುವರು. ತಿರುವನಂತಪುರದಲ್ಲಿ ನಡೆದ ರಾಜ್ಯದ 163 ಮಧ್ಯಾಹ್ನ ಊಟದ ನಿರ್ವಹಣಾ ಅಧಿಕಾರಿಗಳು ಮತ್ತು 14 ಜಿಲ್ಲೆಗಳ ಮೇಲ್ವಿಚಾರಕರ ಸಭೆಯಲ್ಲಿ ಸಚಿವರು ಮಾತನಾಡಿದರು.
ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದಲ್ಲಿ ಶಾಲಾ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ನಿಯಮಿತ ಅಂತರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ವ್ಯವಸ್ಥೆ ಮಾಡಲಾಗುವುದು. ಕಬ್ಬಿಣಾಂಶವಿರುವ ಪೋಲಿಕ್ ಆಸಿಡ್ ಮತ್ತು ಜಂತುಹುಳು ನಿವಾರಣಾ ಮಾತ್ರೆಗಳ ವಿತರಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಮಧ್ಯಾಹ್ನದ ಊಟದ ಯೋಜನೆಯಡಿ ಒಳಗೊಂಡಿರುವ ಎಲ್ಲಾ ಶಾಲೆಗಳ ಆಹಾರ ಮಾದರಿಗಳನ್ನು ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಸೂಕ್ಷ್ಮ ಜೀವವಿಜ್ಞಾನ-ರಾಸಾಯನಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಕೇರಳ ಜಲ ಪ್ರಾಧಿಕಾರದ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರನ್ನು ಪರೀಕ್ಷಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳು ಮತ್ತು ಪಾಲಕ್ಕಾಡ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯಡಿ ಮಕ್ಕಳಿಗೆ ವಾರಕ್ಕೊಮ್ಮೆ 100 ಗ್ರಾಂ ಕಡಲೆ ಮಿಠಾಯಿ ನೀಡುವ ಯೋಜನೆಯನ್ನು ಈ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಇದಕ್ಕಾಗಿ ಕೇಂದ್ರದ ಅನುದಾನ ಕೋರಲಾಗುವುದು. ಈ ವರ್ಷ ಮಧ್ಯಾಹ್ನದ ಊಟದ ಯೋಜನೆಯಡಿ ಎಲ್ಲಾ ಅಡುಗೆಯವರಿಗೆ ರಾಜ್ಯ ಆಹಾರ ಕರಕುಶಲ ಸಂಸ್ಥೆಗಳ ಸಹಾಯದಿಂದ ತರಬೇತಿ ನೀಡಲಾಗುವುದು ಎಂದು ಶಿವಂಕುಟ್ಟಿ ಸಭೆಯಲ್ಲಿ ತಿಳಿಸಿದರು.
ಶಾಲಾ ಮಕ್ಕಳಿಗೆ ಕಡಲೆ ಮಿಠಾಯಿ: ನ.30ರೊಳಗೆ ಪ್ರತಿ ಶಾಲೆಗಳಲ್ಲಿ ತರಕಾರಿ ತೋಟ ನಿರ್ಮಿಸಬೇಕು: ಸಚಿವ ವಿ.ಶಿವಂಕುಟ್ಟಿ
0
ನವೆಂಬರ್ 05, 2022
Tags