ಕಾಸರಗೋಡು: ಜಿಲ್ಲಾಡಳಿತದ ನೇತೃತ್ವದಲ್ಲಿ ಇಂಧನ ಸಚಿವಾಲಯದ ನವರತ್ನ ಕಂಪನಿ ಆರ್‍ಇಸಿ ಲಿಮಿಟೆಡ್ ಮತ್ತು ಅಲಿಮ್ಕೊ ಸಹಯೋಗದಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಂಗವಾಗಿ ಜಿಲ್ಲೆಯ ವಿಕಲಚೇತನರಿಗೆ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾಡಳಿತ ಮತ್ತು ಕೇರಳ ಸಾಮಾಜಿಕ ಭದ್ರತಾ ಮಿಷನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ನಗರಸಭೆಯ ಅಧ್ಯಕ್ಷ ವಿ.ಎಂ.ಮುನೀರ್, ಅಲಿಮ್ಕೋ ಕಂಪನಿಯ ಪಿ ಆ್ಯಂಡ್ ಓ ಅಧಿಕಾರಿ ಲಿಟನ್ ಸರ್ಕಾರ್, ಆರ್.ಡಿ.ಓ ಅತುಲ್ ಎಸ್.ನಾಥ್ ಮಾತನಾಡಿದರು. ಕೇರಳ ಸಾಮಾಜಿಕ ಭದ್ರತಾ ಮಿಷನ್‍ನ ಜಿಲ್ಲಾ ಸಂಯೋಜಕ ಜಿಶೋ ಜೇಮ್ಸ್ ಸ್ವಾಗತಿಸಿ, ಸಂಯೋಜಕ ಮುಹಮ್ಮದ್ ಅಶ್ರಫ್ ವಂದಿಸಿದರು.
ಕಳೆದ ಮೇ ತಿಂಗಳಲ್ಲಿ ವಿವಿಧ ಬ್ಲಾಕ್‍ಗಳಲ್ಲಿ ನಡೆದ ತಪಾಸಣಾ ಶಿಬಿರದಲ್ಲಿ ಅರ್ಹರೆಂದು ಗುರುತಿಸಲಾದ 305 ಜನರಿಗೆ ಸಹಾಯ ಉಪಕರಣ ವಿತರಿಸಲಾಗುತ್ತಿದೆ. ಎಲೆಕ್ಟ್ರಿಕ್ ವೀಲ್‍ಚೇರ್ ಸ್ಮಾರ್ಟ್ ಫೆÇೀನ್‍ಗಳು, ಸ್ಮಾರ್ಟ್ ಕೇನ್, ಶ್ರವಣ ಸಾಧನಗಳು, ಸಿಪಿ ಗಾಲಿಕುರ್ಚಿ, ಕೃತಕ ತೋಳುಗಳು ಮತ್ತು ಕಾಲುಗಳು ಮತ್ತು ಶೂಗಳಂತಹ 500 ಕ್ಕೂ ಹೆಚ್ಚು ಸಹಾಯಕ ಸಾಧನಗಳು ಲಭ್ಯವಿದೆ. ಯೋಜನೆಗೆ 35 ಲಕ್ಷ ವೆಚ್ಚ ಮಾಡಲಾಗುತ್ತಿದೆ.