ನವದೆಹಲಿ: ನೋಟು ಅಮಾನ್ಯೀಕರಣದ ಬಳಿಕ ಇದೇ ಮೊದಲ ಬಾರಿಗೆ ಸುಮಾರು 30.88 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹಣ ಜನರ ಕೈ ಸೇರಿದೆ ಎಂದು ವರದಿಯೊಂದು ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವರದಿಯಲ್ಲಿ 21 ಅಕ್ಟೋಬರ್ 2022 ರ ವೇಳೆಗೆ ಜನರ ಬಳಿ 30.88 ಲಕ್ಷ ಕೋಟಿ ರೂಪಾಯಿ ನಗದು ಹಣ ಇರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದು ಈ ಹಿಂದಿನ ಎಲ್ಲಾ ಅಂಕಿಅಂಶಗಳಿಗಿಂತ ಹೆಚ್ಚು ಎಂದು ಹೇಳಲಾಗಿದ್ದು, ಗರಿಷ್ಠ ಮಟ್ಟಕ್ಕೆ ಜಿಗಿದಿದೆ.
ನೋಟು ಅಮಾನ್ಯೀಕರಣ (Demonetisation) ಘೋಷಣೆಯಾಗಿ 6 ವರ್ಷ ಕಳೆದಿದ್ದು, ಈ ಸಂದರ್ಭದಲ್ಲಿ ಜನರ ಬಳಿ ಇರುವ ನಗದು (Cash) ಪ್ರಮಾಣ ಹೆಚ್ಚುತ್ತಲೇ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನೀಡಿರುವ ವರದಿಯಲ್ಲಿ, 21 ಅಕ್ಟೋಬರ್ 2022 ರ ವೇಳೆಗೆ ಜನರ ಬಳಿ 30.88 ಲಕ್ಷ ಕೋಟಿ ರೂಪಾಯಿ ಇದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದು ಕಳೆದ ಎಲ್ಲಾ ಅಂಕಿಅಂಶಗಳಿಗಿಂತ ಹೆಚ್ಚಿದ್ದು, ಗರಿಷ್ಠ ಮಟ್ಟಕ್ಕೆ ಜಿಗಿದಿದೆ.
ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಈ ವರದಿ ಜನರ ಬಳಿ ಇರುವ ನಗದು ಹಣದ ಪ್ರಮಾಣ ಎಷ್ಟು? ಹಾಗೂ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಎಷ್ಟು ಎನ್ನುವುದರ ಮಾಹಿತಿ ನೀಡಿದ್ದು, ಸದ್ಯದ ವರದಿಗಳು ಹೇಳಿರುವ ಪ್ರಕಾರ 30.88 ಲಕ್ಷ ಕೋಟಿ ರೂಗಳಲ್ಲಿ, ಸಾರ್ವಜನಿಕರ ಬಳಿ ಇರುವ ಕರೆನ್ಸಿ ನವೆಂಬರ್ 4, 2016 ಕ್ಕೆ ಕೊನೆಗೊಂಡ ಹದಿನೈದು ದಿನಗಳ ಮಟ್ಟಕ್ಕಿಂತ ಶೇ.71.84 ರಷ್ಟು ಹೆಚ್ಚಾಗಿದೆ.
ಕಳೆದ ವಾರ ಆರ್‌ಬಿಐ ಬಿಡುಗಡೆ ಮಾಡಿದ ಹಣದ ಪೂರೈಕೆಯ ಹದಿನೈದು ದಿನಗಳ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 21 ರ ಹೊತ್ತಿಗೆ ಸಾರ್ವಜನಿಕರ ಬಳಿ ಇರುವ ಕರೆನ್ಸಿ 30.88 ಲಕ್ಷ ಕೋಟಿ ರೂಗೆ ಏರಿಕೆಯಾಗಿದೆ. ಅದೇ ನೋಟು ಅಮಾನ್ಯ ಮಾಡುವುದಕ್ಕೂ ಮುನ್ನ ಅಂದರೆ ನವೆಂಬರ್ 4, 2016ಕ್ಕೆ ಹೋಲಿಕೆ ಮಾಡಿದರೆ 17.97 ಲಕ್ಷ ಕೋಟಿ ರೂಪಾಯಿ ಜನರ ಬಳಿ ಇತ್ತು. ಈ ಎರಡೂ ದಿನಾಂಕದ ಹಣದ ರಾಶಿಯನ್ನು ಹೋಲಿಕೆ ಮಾಡಿದರೆ, ಪ್ರಸ್ತುತ ಜನರ ಬಳಿ ನಗದು ಹಣ ಗಮನಾರ್ಹವಾಗಿ ಹೆಚ್ಚಳವಾಗಿದೆ.
ನವೆಂಬರ್ 8, 2016, ರಾತ್ರಿ 8:15ರ ಸುಮಾರಿಗೆ ಪ್ರಧಾನಿ ಮೋದಿ, ದೇಶದಲ್ಲಿ ಚಲಾವಣೆಯಲ್ಲಿದ್ದ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಪ್ರಧಾನಿ ಮೋದಿಯವರ ನಿರ್ಧಾರ ಇಡೀ ದೇಶಕ್ಕೆ ದೊಡ್ಡ ಶಾಕ್ ನೀಡಿತ್ತು. ಆರ್ಥಿಕತೆಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಕಡಿಮೆ ಮಾಡುವ ಗುರಿಯೊಂದಿಗೆ ನೋಟುಗಳನ್ನು ನಿಷೇಧ ಮಾಡಲಾಗಿತ್ತು. ನೋಟ್ ಬ್ಯಾನ್‌ನಿಂದಾಗಿ ಹಲವಾರು ತೊಂದರೆಗಳನ್ನು ಸಹ ಜನಸಾಮಾನ್ಯರು ಅನುಭವಿಸುವಂತಾಯಿತು. ನೋಟುಗಳನ್ನು ಅಮಾನ್ಯಗೊಳಿಸಿದ ದಿನದಿಂದ ಕೇಂದ್ರ ಸರ್ಕಾರ ಡಿಜಿಟಲ್ ಕರೆನ್ಸಿಗೆ ಒತ್ತು ನೀಡುತ್ತಾ ಬಂದಿದೆ.
ಡಿಜಿಟಲ್ ಪಾವತಿ ಜನಪ್ರಿಯತೆ ಮತ್ತಷ್ಟು ಹೆಚ್ಚಳ
ಆರ್ಥಿಕತೆಯಲ್ಲಿ ನಗದು ಬಳಕೆ ಸ್ಥಿರವಾಗಿ ಹೆಚ್ಚುತ್ತಿದ್ದು, ಪಾವತಿಗಳ ಹೊಸ ಮತ್ತು ದೂರದ
ಅನುಕೂಲಕರ ಡಿಜಿಟಲ್ ಪರ್ಯಾಯಗಳು ಜನಪ್ರಿಯವಾಗಿವೆ. ದೇಶದಲ್ಲಿ ಡಿಜಿಟಲ್ ಪಾವತಿ
ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಬೆನ್ನಲ್ಲೇ ಡಿಜಿಟಲ್ ಪಾವತಿ ಜನಪ್ರಿಯತೆ
ಮತ್ತಷ್ಟು ಹೆಚ್ಚಳವಾಗಿದೆ. ಸಂಪರ್ಕರಹಿತ ವಹಿವಾಟುಗಳಿಗೆ ಒತ್ತು ನೀಡಿದ ಕೋವಿಡ್
ಸಾಂಕ್ರಾಮಿಕವು ಡಿಜಿಟಲ್ ಮೋಡ್‌ಗಳಿಗೆ ಮತ್ತಷ್ಟು ಉತ್ತೇಜನ ನೀಡಿತು. ಭಾರತದಲ್ಲಿ ಆನ್
ಲೈನ್ ನಗದು ಪಾವತಿ ಪ್ರಕ್ರಿಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.
ಡಿಜಿಟಲ್ ಪೇಮೆಂಟ್‌ಗೆ ಪ್ರತಿಯೊಬ್ಬರೂ ಒಗ್ಗಿಕೊಳ್ಳುತ್ತಿದ್ದು, ಇದರ ಬಳಕೆ ಕೂಡ ಹೆಚ್ಚುತ್ತಿದೆ. ಈ ಬಗ್ಗೆಯೂ ಆರ್ ಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, 'ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಪಾವತಿಗಳು ದೇಶಾದ್ಯಂತ ಮೌಲ್ಯ ಮತ್ತು ಪರಿಮಾಣದ ಪರಿಭಾಷೆಯಲ್ಲಿ ಕ್ರಮೇಣವಾಗಿ ಬೆಳೆಯುತ್ತಿದ್ದರೂ, ಅದೇ ಸಮಯದಲ್ಲಿ, ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಚಲಾವಣೆಯಲ್ಲಿರುವ ಕರೆನ್ಸಿ ಜಿಡಿಪಿ ಅನುಪಾತಕ್ಕೆ ಹೆಚ್ಚಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಜಿಡಿಪಿ ಅನುಪಾತಕ್ಕೆ ಡಿಜಿಟಲ್ ಪಾವತಿಗಳ ಹೆಚ್ಚಳವು ದೇಶದ ಕರೆನ್ಸಿ ಮತ್ತು ಜಿಡಿಪಿ ಅನುಪಾತದಲ್ಲಿ ಸ್ವಯಂಚಾಲಿತವಾಗಿ ಕುಸಿತವನ್ನು ಸೂಚಿಸುವಂತೆ ತೋರುತ್ತಿಲ್ಲ ಎಂದು ದತ್ತಾಂಶ ಸೂಚಿಸುತ್ತದೆ" ಎಂದು ಆರ್‌ಬಿಐ ಹೇಳಿದೆ.