HEALTH TIPS

ಸಂಘಟನೆಯಿಂದ ಶಕ್ತರಾಗಿ, ಕಾರ್ಯದಲ್ಲಿ ಅಚಲರಾಗಿ: ಸಂಸದ ಉಣ್ಣಿತ್ತಾನ್: ಎಕೆಪಿಎ 38ನೇ ಕಾಸರಗೋಡು ಜಿಲ್ಲಾ ಸಮ್ಮೇಳನ; ಪ್ರತಿನಿಧಿ ಸಮ್ಮೇಳನ


           ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) 38ನೇ ಕಾಸರಗೋಡು ಜಿಲ್ಲಾಸಮ್ಮೇಳನವು ನೀಲೇಶ್ವರ ಶ್ರೀ ವೈಕುಂಠಂ ಸಭಾ ಭÀವನದಲ್ಲಿ ಚಂದ್ರನ್ ವೆಡಿಕ್ಕುನ್ನು ನಗರದಲ್ಲಿ ಮಂಗಳವಾರ ಜರಗಿತು.
          ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ದೀಪಬೆಳಗಿಸಿ ಉದ್ಘಾಟಿಸಿದರು. ಛಾಯಾಗ್ರಾಹಕರು ಹಾಗೂ ಛಾಯಾಗ್ರಹಣದೊಂದಿಗೆ ಅನೇಕ ವರ್ಷದ ನಂಟು ಇದೆ. ಸಾಹಸಮಯವಾದ ಜೀವನ ನಿಮ್ಮದಾಗಿದೆ ಎಂಬ ಅರಿವು ನಮಗಿದೆ. ಯುದ್ಧಕಾಲದಲ್ಲಿ ಛಾಯಾಗ್ರಾಹಕ ತೆಗೆದ ಚಿತ್ರವು ಯುದ್ದವನ್ನೇ ನಿಲ್ಲಿಸಲು ಪ್ರೇರಣೆಯಾಗಿರುವ ಕಥೆಯಿದೆ. ಡಿಜಿಟಲ್ ಯುಗದಲ್ಲಿ ನೂತನ ತಂತ್ರಜ್ಞಾನಕ್ಕೆ ನಾವು ಒಗ್ಗಿಕೊಳ್ಳಬೇಕು. ಸಂಘಟನೆಯಿಂದ ಶಕ್ತರಾಗಿ, ಕಾರ್ಯದಲ್ಲಿ ಅಚಲರಾಗಿ ಎಂದು ತಿಳಿಸಿದ ಅವರು ಜನಜೀವನದೊಂದಿಗೆ ಹೊಂದಿಕೊಂಡು ಬಾಳುವ ನಿಮಗೆ ಒಳಿತಾಗಲಿ ಎಂದರು.
            ಜಿಲ್ಲಾ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅನಿಲ್ ಐಪೆÇೀಕಸ್ ಪ್ರಥಮ, ಸುನಿಲ್ ಕುಮಾರ್ ಕಾಸರಗೋಡು ದ್ವಿತೀಯ, ವೀಡಿಯೋ ಸ್ಪರ್ಧೆಯಲ್ಲಿ ವಿಜೇತರಾದ ಬಾಬು ಜಾನ್ಸಿ, ಬಾಲಕೃಷ್ಣನ್ ಅವರಿಗೆ ಬಹುಮಾನ ವಿತರಿಸಲಾಯಿತು.
          ಎಕೆಪಿಎ ರಾಜ್ಯ ಅಧ್ಯಕ್ಷ ಗಿರೀಶ್ ಪಟ್ಟಾಂಬಿ ಮಾತನಾಡಿ ಸಂಘಟನೆಯು ಬಲಿಷ್ಠವಾಗಿರುವ ಕಾರಣ ಛಾಯಾಗ್ರಾಹಕರು ಇಂದು ತಲೆಯೆತ್ತಿ ನಿಲ್ಲಲು ಸಾಧ್ಯವಾಗಿದೆ. ಸಂಘಟನೆಯೊಂದಿಗೆ ಸದಸ್ಯರು ಉತ್ತಮ ಹೊಂದಾಣಿಕೆಯಿಂದ ಮುಂದುವರಿದಾಗ ಮುಖಂಡರಿಗೆ ಇನ್ನಷ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರೇರಣೆಯಾಗುತ್ತದೆ ಎಂದರು.
         ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎನ್.ಎ.ಭರತನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಉಣ್ಣಿ ಕೂವೋಡಂ `ಸಾಂತ್ವನಂ' ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕ್ಷೇಮನಿಧಿ ಅಧಿಕಾರಿ ವಿ.ಅಬ್ದುಲ್ ಸಲಾಂ ಕ್ಷೇಮನಿಧಿಯಿಂದ ಸದಸ್ಯರಿಗಿರುವ ಅನುಕೂಲತೆಗಳನ್ನು ತಿಳಿಸಿದರು. ಎಸ್‍ಎಸ್‍ಎಲ್‍ಸಿ ಹಾಗೂ ಪ್ಲಸ್ ಟುವಿನಲ್ಲಿ ಗಮನಾರ್ಹ ಸಾಧನೆಗೈದ ಸದಸ್ಯರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ರಾಜ್ಯ ಫೋಟೋಗ್ರಫಿ ಕ್ಲಬ್‍ನ ಸಂಚಾಲಕ ಗೋವಿಂದನ್ ಚೆಂಗರಂಗಾಡು, ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ.ಕುಂಬಳೆ, ರಾಜ್ಯ ಸಮಿತಿ ಸದಸ್ಯ ಹರೀಶ್ ಪಾಲಕ್ಕುನ್ನು, ವಿಜಯನ್ ಶೃಂಗಾರ್, ಮಹಿಳಾ ಘಟಕ ಅಧ್ಯಕ್ಷೆ ಪ್ರಜಿತಾ ಕಲಾಧರನ್, ದಿನೇಶ ಇನ್‍ಸೈಟ್, ಸುಧೀರ್ ಕೆ., ರಂಜಿತ್ ಐಮ್ಯಾಜಿಕ್ ಪಾಲ್ಗೊಂಡಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಎ. ಸ್ವಾಗತಿಸಿ, ಜೊತೆಕಾರ್ಯದರ್ಶಿ ಚಂದ್ರಶೇಖರ ಕಾಸರಗೋಡು ವಂದಿಸಿದರು. ನಂತರ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕೆ.ಸಿ.ಅಬ್ರಹಾಂ, ಉಪಾಧ್ಯಕ್ಷ ಷರೀಫ್ ಫ್ರೇಮ್ ಆರ್ಟ್, ವಿಜಯನ್ ಶೃಂಗಾರ್, ಕಾರ್ಯದರ್ಶಿ ಸುಗುಣನ್ ಇರಿಯ, ಜೊತೆ ಕಾರ್ಯದರ್ಶಿ ಮುಹಮ್ಮದ್ ಕುಂಞÂ, ಸುಧೀರ್ ಕೆ, ಕೋಶಾಕಾರಿಯಾಗಿ ವೇಣು ವಿ.ವಿ ಆಯ್ಕೆಯಾದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries