ಕಾಸರಗೋಡು: ಕಾಸರಗೋಡಿನ ತೆರೆಮರೆಯ ಮತಾಂಧದತೆಯ ಸಂಘರ್ಷಗಳನ್ನು ಕಳೆದೆರಡು ಅವತರಣಿಕೆಗಳಲ್ಲಿ ತೆರೆಸಿಕೊಳ್ಳುತ್ತಿರುವಂತೆ ನಾನಾ ಮುಖಗಳಿಂದ ವ್ಯಾಪಕ ಪ್ರಮಾಣದ ಬೆದರಿಕೆಗಳು, ಧ್ವನಿಯಡಗಿಸುವ ವಿದ್ಯಮಾನಗಳು ನನಗೆ ಅನುಭವವಾಗಿದೆ. ಪೋನ್ ಕರೆಗಳ ಹೊರತಾಗಿ, ರಾಶಿ ಸಂದೇಶಗಳು ಇನ್ ಬಾಕ್ಸ್ ಗಳಲ್ಲಿ ತುಂಬಿ ಹಳೆಯ ಚಾಳಿಯ ಪುನರಾವರ್ತನೆಗೆ ಒತ್ತಡ ತರುತ್ತಿರುವುದು ವೇದ್ಯವಾಗುತ್ತಿದೆ. ಕಾರಣ ನಾನೂ ಕಾಸರಗೋಡಿನ ಓರ್ವ ಹಿಂದು.
ಮೊದಲಿನಿಂದಲೂ ಇಲ್ಲಿ ಏನಾಗುತ್ತಿದೆಯೆಂದರೆ, ಧ್ವನಿ ಎತ್ತಿದವರ, ಎತ್ತಲು ಪ್ರಯತ್ನಿಸುವವರನ್ನು ಮೊಳಕೆಯಲ್ಲೇ ಕೀಳುವ ಪ್ರಯತ್ನ ಎಲ್ಲೆ ವಿಭಾಗದಿಂದಲೂ ಆಗಿದೆ; ಆಗುತ್ತಿದೆ. ಸಮಾನತೆ, ಧರ್ಮ ನಿರಪೇಕ್ಷತೆ, ‘ಹಿಂದು-ಮುಸ್ಲಿಂ-ಕ್ರೈಸ್ತ’ ಸಮಾನತೆಗಳ, ಸಹಬಾಳ್ವೆಯ ಚರ್ವಿತ ಪಾಠಗಳು ಎಲ್ಲೆಂದರಲ್ಲಿ ಕೇಳಿಬರುತ್ತಿರುವುದು ವಾಡಿಕೆ. ಹಿಂದೂಗಳಲ್ಲೂ ಅದಕ್ಕೆ ಟೊಂಕೆಕಟ್ಟಿ ನಿಂತ ಅನೇಕ ಶೂರ-ವೀರರು ಪಂಚೆಯನ್ನು ಸಮಗೊಳಿಸುತ್ತ ಮುನ್ನೆಲೆಗೆ ಬಂದುಬಿಡುತ್ತಾರೆ. ಅದೂ ನಾವು ಹಿಂದೂಗಳು, ಸಮಪ್ರಜ್ಞೆಯಿಂದ ಇರಬೇಕೆಂಬ ಸಿದ್ದಪಾಠಗಳೊಂದಿಗೆ.
ಉಪ್ಪಳದ ಐಲ ಮೈದಾನದ ಸ್ಥಿತಿ, ಅಡ್ಕತ್ತಬೈಲು ಶಾಲಾ ಮೈದಾನ, ಆರಿಕ್ಕಾಡಿ, ಪೊವ್ವಲ್ ಕೋಟೆಗಳು, ಮಧೂರು ಸಮೀಪದ ಮಾಯಿಲಂಕೋಟೆ ಹೀಗೆ ಸಾಲು-ಸಾಲು ಪರಂಪರೆಯ ಸ್ಥಳಗಳು ಇಂದು ಯಾವ ಸ್ಥಿತಿಗೆ ಬಂದು ತಲಪಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಭಿವೃದ್ದಿ, ಹಣಬಲದ ಹೆಸರಲ್ಲಿ ಏನೇನು ಆಟೋಪಗಳಾಗುತ್ತಿದೆ ಎಂಬುದು ಕಳವಳಕ್ಕೀಡುಗೊಳಿಸುತ್ತದೆ. ಇದು ಇಂದು-ನಿನ್ನೆಯದಲ್ಲ.
ಇವೆಲ್ಲವೂ ಬಂದುತಲಪುವುದು ಟಿಪ್ಪುವಿನ ಅತಿಕ್ರಮಣದ ಕಾಲಘಟ್ಟಕ್ಕೆ. ಮಲಬಾರಿನ ದಾಳಿಯ ಕಾಲಘಟ್ಟದಿಂದ(17ನೇ ಶತಮಾನ) ಆರಂಭಗೊಂಡ ಇಂತಹ ಬೆದರಿಕೆಗಳು, ಮೋಪ್ಲಾ ದಂಗೆಯ ಮೂಲಕ ಸಾಗಿ ಇದೀಗ ಇಲ್ಲಿಯವರೆಗೆ ಬಂದುನಿಂತಿದೆ.
ಕಲ್ಲು-ಮಣ್ಣುಗಳ ಬೃಹತ್ ವ್ಯವಹಾರ ಜಾಲ ಕಾಸರಗೋಡಿನಾದ್ಯಂತ ಕಳೆದ ಒಂದು ದಶಕದಿಂದ ವ್ಯಾಪಕಗೊಂಡಿರುವ ದಂಧೆಯಾಗಿ ಎತ್ತಲೋ ಒಯ್ಯುವಂತೆ ಭಾಸವಾಗುತ್ತಿಲ್ಲವೇ? ಗ್ರಾಮ-ಗ್ರಾಮಗಳಲ್ಲಿ ತಲೆಯೆತ್ತಿರುವ ಸೂಪರ್ ಮಾರ್ಕೆಟ್ ಗಳ ಹಿಂದಿರುವುದೇನು? ದಿನದ 24 ಗಂಟೆಯೂ ದ್ವಿಚಕ್ರ ವಾಹನ, ಕಾರುಗಳ ದರ್ಬಾರಿನ ನಾಗಾಲೋಟ ಏನಾಗಿರಬಹುದು? ಕೋವಿಡ್ ನಂತರ ಜಿಲ್ಲೆಯ ಹಲವೆಡೆ ವೇಗವಾಗಿ ತಲೆಯೆತ್ತುತ್ತಿರುವ ಮೆಡಿಕಲ್ ದಂಧೆಯ ಲಕ್ಷ್ಯವಾದರೂ ಏನಿರಬಹುದು? ಮುಂದೆ ನೋಡೋಣ.
ಬದಿಯಡ್ಕದ ವೈದ್ಯರ ಆತ್ಮಾಹುತಿ: ಹೇಳುವುದೇನು?-ಭಾಗ:3
0
ನವೆಂಬರ್ 13, 2022