ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾನುವಾರುಗಳ ಕಾಲಬಾಯಿ ರೋಗ ನಿರೋಧಕವಾಗಿ ಪೆರ್ಲ ಮೃಗಾಸ್ಪತ್ರೆಯ ನೇತೃತ್ವದಲ್ಲಿ 3ನೇ ಹಂತದ ಚುಚ್ಚುಮದ್ದು ವಿತರಣಾ ಅಭಿಯಾನ ಆರಂಭಿಸಲಾಗಿದೆ. ಪಂ.ನ ಮಾಜಿ ಉಪಾಧ್ಯಕ್ಷ, ಪ್ರಗತಿಪರ ಹೈನುಗಾರ ಅಬೂಬಕ್ಕರ್ ಸಿದ್ದೀಕ್ ಅವರ ಖಂಡಿಗೆ ಫಾಮ್ರ್ಸ್ ನಲ್ಲಿ ನಡೆದ ಚುಚ್ಚುಮದ್ದು ವಿತರಣಾ ಅಭಿಯಾನಕ್ಕೆ ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಚಾಲನೆ ನೀಡಿದರು. ನಾಲ್ಕು ತಿಂಗಳಿನಿಂದ ಹೆಚ್ಚಿನ ಪ್ರಾಯ ಪರಿಧಿಯ ಜಾನುವಾರುಗಳಿಗೆ ಚುಚ್ಚುಮದ್ದು ನೀಡಲಾಗುತ್ತಿದ್ದು ಡಿ.8ರ ತನಕ ಅಭಿಯಾನ ಮುಂದುವರಿಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಎಣ್ಮಕಜೆ ಗ್ರಾ.ಪಂ. ಜಾನುವಾರುಗಳ ಕಾಲುಬಾಯಿ ರೋಗಕ್ಕೆ 3ನೇ ಹಂತದ ಚುಚ್ಚುಮದ್ದು ವಿತರಣಾ ಅಭಿಯಾನಕ್ಕೆ ಚಾಲನೆ
0
ನವೆಂಬರ್ 19, 2022
Tags