ಬದಿಯಡ್ಕ: ಉತ್ತಮವಾದ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ನಮ್ಮ ಮುಂದಿನ ಸಮಾಜ ಶ್ರೇಷ್ಠತೆಯತ್ತ ಸಾಗುತ್ತದೆ. ನಮ್ಮ ಮಕ್ಕಳು, ಮನೆಯವರಲ್ಲಿ ಸದಾ ಧಾರ್ಮಿಕ ಚಿಂತನೆಗಳು ಮೂಡಿಬರುವಂತಹ ಕಾರ್ಯಗಳು ನಡೆಯಬೇಕು. ತನ್ಮೂಲಕ ಹಿಂದೂಸಮಾಜವು ಬಲಿಷ್ಠವಾಗಬೇಕಾಗಿದೆ ಎಂದು ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಹೇಳಿದರು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದ 43ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶ್ರೀಮಂದಿರದ ಗೌರವಾಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಅಧ್ಯಕ್ಷ ಉದಯಕುಮಾರ್ ಮೈಕುರಿ, ಗುರುಸ್ವಾಮಿ ರಮೇಶ ಆಚಾರ್ಯ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ, ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯ, ವಿದ್ಯುತ್ ಇಲಾಖೆಯ ಜಯಂತಿ ಚಕ್ರೇಶ್ವರ ಮಲ್ಲಡ್ಕ, ಧರ್ಮಶಾಸ್ತಾ ಮಿತ್ರಮಂಡಳಿಯ ಅಧ್ಯಕ್ಷ ಜನಾರ್ದನ ನಾಯ್ಕ, ಮಾತೃಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮೀ ಜನಾರ್ದನ, ಶಿವಾಜಿ ಫ್ರೆಂಡ್ಸ್ ಅಧ್ಯಕ್ಷ ಜಯಪ್ರಕಾಶ್, ರುದ್ರ ಫ್ರೆಂಡ್ಸ್ ಅಧ್ಯಕ್ಷ ರಂಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ನಾಯ್ಕ ನೀರ್ಚಾಲು ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣ ಮಲ್ಲಡ್ಕ ಸ್ವಾಗತಿಸಿ, ಅರುಣಾ ಉದಯಕುಮಾರ್ ವಂದಿಸಿದರು.
ಡಿ. 27,28ರಂದು 43 ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದ 43ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ: ಧಾರ್ಮಿಕ ಚಿಂತನೆಗಳಿಂದ ಸಮಾಜವು ಬಲಿಷ್ಠವಾಗಲಿದೆ- ಮಧುಸೂದನ ಆಯರ್
0
ನವೆಂಬರ್ 24, 2022
Tags