ರಾಯ್‌ಪುರ: ದೇಶದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದ್ದು ಗೆಳತಿಯನ್ನೇ ಕೊಂದು ನಾಲ್ಕು ದಿನಗಳ ಕಾಲ ತನ್ನ ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದ ಘಟನೆ ವರದಿಯಾಗಿದೆ.
ಮೆಡಿಕಲ್ ಸ್ಟೋರ್‌ನ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ತನ್ನ ಗೆಳತಿ ಪ್ರಿಯಾಂಕಾಳನ್ನು ಕೊಂದು ಶವವನ್ನು ನಾಲ್ಕು ದಿನಗಳ ಕಾಲ ತನ್ನ ಅಂಗಡಿಯಲ್ಲಿಟ್ಟು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸಾಹು ಮತ್ತು ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ಸಮಯದಿಂದ ಜಗಳ ನಡೆಯುತ್ತಿತ್ತು. ಪ್ರಿಯಾಂಕಾ ಬಿಲಾಸ್‌ಪುರದ ಹಾಸ್ಟೆಲ್‌ನಲ್ಲಿ ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.
'ಪ್ರಿಯಾಂಕಾ ಮತ್ತು ಆಶಿಶ್ ಸಾಹು ಮಧ್ಯೆ ಆತ್ಮಿಯತೆ ಬೆಳೆಯಿತು. ನಂತರ ಇಬ್ಬರು ಒಟ್ಟಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರು. ಷೇರು ಮಾರುಕಟ್ಟೆಯಲ್ಲಿನ ನಷ್ಟದ ನಂತರ ತನ್ನಿಂದ ಸಾಲ ಪಡೆದಿದ್ದ 11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆಶಿಶ್ ಗೆ ಒತ್ತಡ ಹೇರುತ್ತಿದ್ದಳು ಎಂದು ಬಿಲಾಸ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ಪಾರುಲ್ ಮಾಥುರ್ ತಿಳಿಸಿದರು.
ಬಿಲಾಸ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು. ನಂತರ ಪೊಲೀಸರು ಸಾಹು ಪ್ರಮುಖ ಆರೋಪಿ ಎಂದು ಶಂಕಿಸಿದ್ದು ಆತನ ಮೇಲೆ ಕಣ್ಣಿಟ್ಟಿತ್ತು.
ಕುಟುಂಬದ ಸದಸ್ಯರೊಬ್ಬರು ಪ್ರಿಯಾಂಕಾ ಮತ್ತು ಸಾಹು ಇಬ್ಬರು ಪರಿಚಿತರು. ಅಲ್ಲದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಹಿರಂಗಪಡಿಸಿದರು. ಆದ್ದರಿಂದ, ಆರೋಪಿಯನ್ನು ಪ್ರಮುಖ ಶಂಕಿತನಾಗಿ ಗುರುತಿಸಿದ್ದೇವು. ಸಾಹು ಅಂಗಡಿ ಮತ್ತು ನಿವಾಸದ ಸುತ್ತಮುತ್ತಲಿನ ಸಿಸಿಟಿವಿಯ ದೃಶ್ಯಗಳ ಜೊತೆಗೆ ಅವನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು ಹೇಳಿದರು.
ನವೆಂಬರ್ 14ರಂದು ಪ್ರಿಯಾಂಕಾಳನ್ನು ಕೊಂದ ಸಾಹು ದೇಹವನ್ನು ಮೆಡಿಕಲ್ ಶಾಪ್ ನಲ್ಲಿ ಇಟ್ಟಿದ್ದು. ಅಲ್ಲದೆ ಶವ ವಿಲೇವಾರಿಗೆ ಸಮಯ ಕಾಯುತ್ತಿದ್ದನು. ಆತ ದೇಹವನ್ನು ಸಾಗಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಆರ್ಯ ಹೇಳಿದ್ದಾರೆ.