ನವದೆಹಲಿ: 'ಕ್ರಿಮಿನಲ್ ಪ್ರಕರಣ, ನೇರ ಮತ್ತು ಪರೋಕ್ಷ ತೆರಿಗೆ, ಭೂ ಸ್ವಾಧೀನ ಹಾಗೂ ಅಪಘಾತ ಪರಿಹಾರ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಗಾಗಿ ನಾಲ್ಕು ವಿಶೇಷ ನ್ಯಾಯಪೀಠಗಳನ್ನು ರಚಿಸಲಾಗಿದ್ದು, ಇವು ಮುಂದಿನ ವಾರದಿಂದ ಕಾರ್ಯನಿರ್ವಹಿಸಲಿವೆ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಬುಧವಾರ ತಿಳಿಸಿದ್ದಾರೆ.