ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಮಹಿಳೆಯನ್ನು ಕೊಂದು ಆ ದೇಶದಿಂದ ಪರಾರಿಯಾಗಿದ್ದ ಭಾರತೀಯ ಮೂಲದ ಆಸ್ಟ್ರೇಲಿಯಾದ ಪ್ರಜೆಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮಹಿಳೆಯನ್ನು ಕೊಂದು ಆ ದೇಶದಿಂದ ಪರಾರಿಯಾಗಿದ್ದ ಭಾರತೀಯ ಮೂಲದ ಆಸ್ಟ್ರೇಲಿಯಾದ ಪ್ರಜೆ ರಾಜ್ವಿಂದರ್ ಸಿಂಗ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆತನ ಬಂಧನಕ್ಕೆ ಆಸ್ಟ್ರೇಲಿಯಾ ಪೊಲೀಸರು1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನ ಘೋಷಿಸಿದ್ದರು.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ 2018ರಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಆರೋಪದಡಿ ಭಾರತೀಯ ನರ್ಸೊಬ್ಬರನ್ನು ಹೊಸದಿಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 38 ವರ್ಷದ ರಾಜವಿಂದರ್ ಸಿಂಗ್ ಅವರೇ ಬಂಧಿತ ವ್ಯಕ್ತಿ. 2018ರಲ್ಲಿ ಕ್ವೀನ್ಸ್ ಲ್ಯಾಂಡ್ ಬೀಚ್ ನಲ್ಲಿ 24 ವರ್ಷದ ಆಸ್ಟ್ರೇಲಿಯನ್ ಪ್ರಜೆ ತೊಯಾ ಕಾರ್ಡಿಂಗ್ಲೆ ಎಂಬವರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದಾರೆ. ನಂತರ ಭಾರತಕ್ಕೆ ಪರಾರಿಯಾಗಿದ್ದ.
ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಡಿಂಗ್ಲೆ ಕ್ವೀನ್ಸ್‌ಲ್ಯಾಂಡ್ ನ ವಾಂಗೆಟ್ಟಿ ಬೀಚ್ ನಲ್ಲಿ ತನ್ನ ನಾಯಿಯನ್ನು ವಾಕಿಂಗ್ ಮಾಡುತ್ತಿದ್ದಾಗ ಕೊಲ್ಲಲ್ಪಟ್ಟಿದ್ದಳು. ಎರಡು ದಿನಗಳ ನಂತರ ರಾಜವಿಂದರ್ ಸಿಂಗ್ ತನ್ನ ಕೆಲಸ, ಹೆಂಡತಿ ಮತ್ತು ಮೂವರು ಮಕ್ಕಳನ್ನು ಬಿಟ್ಟು ಆಸ್ಟ್ರೇಲಿಯಾದಿಂದ ಪರಾರಿಯಾಗಿದ್ದ. ಆರೋಪಿ ಸಿಂಗ್ ಬಂಧನಕ್ಕೆ ಕಾರಣವಾದ ಮಾಹಿತಿಗಾಗಿ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ನೀಡಿದ್ದರು. ಇದು ಇಲಾಖೆಯಿಂದ ಇದುವರೆಗೆ ನೀಡಲ್ಪಟ್ಟ ಅತಿದೊಡ್ಡ ಮೊತ್ತವಾಗಿದೆ.