HEALTH TIPS

ಹಾಲಿನ ದರ ಏರಿಕೆ: ಹೈನುಗಾರಿಕೆ ಗುಂಪುಗಳು ಹಾಗೂ ರೈತರಿಗೆ ಹಿನ್ನಡೆ: ಹೈನುಗಾರರಿಗೆ ಲೀಟರ್‍ಗೆ ಕೇವಲ 4 ರೂ.ಮಾತ್ರ ಲಭ್ಯ


          ಆಲತ್ತೂರು: ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಹಾಲಿನ ಶೇಖರಣಾ ದರ ಪರಿಷ್ಕರಿಸಿ ಚಾರ್ಟ್ ಬಿಡುಗಡೆ ಮಾಡಲಾಗಿದೆ.
           ಸಹಕಾರಿ ಹಾಲು ಮಾರಾಟ ಮಹಾಮಂಡಳವು ರೈತರಿಂದ ಗುಂಪುಗಳಲ್ಲಿ ಹಾಲನ್ನು ಸಂಗ್ರಹಿಸಿ ಅಲ್ಲಿಂದ ಖರೀದಿಸುವ ವೆಚ್ಚದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
           ಡಿ.1ರಂದು ಹಾಲಿನ ದರ 6 ರೂ. ಏರಿಕೆಯಾಗಲಿದ್ದು ರೈತನಿಗೆ 5.02 ರೂ. ಸಿಗಲಿದೆ ಎಂದು ಘೋಷಿಸಲಾಗಿತ್ತು. 3.5% ಕೊಬ್ಬು ಮತ್ತು 8% ಎಸ್.ಎನ್.ಎಫ್ ಹೊಂದಿರುವ ಹಾಲು ಮಾತ್ರ ಘೋಷಿತ ಬೆಲೆಯನ್ನು ಪಡೆಯುತ್ತದೆ. ಹಾಲು ಕರೆಯುವ  ಋತುವಿನಲ್ಲಿ ಯಾವಾಗಲೂ ಹಾಲು ಈ ಗುಣಮಟ್ಟವನ್ನು ಪಡೆಯುವುದಿಲ್ಲವಾದ್ದರಿಂದ, ಹೆಚ್ಚಿದ ಬೆಲೆಯ ಲಾಭವು ಸಂಪೂರ್ಣವಾಗಿ ರೈತನಿಗೆ ದೊರೆಯುವುದಿಲ್ಲ. ಇದುವರೆಗಿನ ಸರಾಸರಿ ಬೆಲೆ ಲೀಟರ್‍ಗೆ 36 ರೂ. ಪರಿಷ್ಕøತ ಚಾರ್ಟ್ ಪ್ರಕಾರ, ಸರಾಸರಿ ರೈತರಿಗೆ ಪ್ರತಿ ಲೀಟರ್‍ಗೆ ಕೇವಲ 40.04 ರೂ. ಲಭಿಸಲಿದೆ. ಇದರಿಂದ ಕೇವಲ ನಾಲ್ಕು ರೂಪಾಯಿ ಹೆಚ್ಚಳವಾದಂತಾಗುತ್ತದೆ.
        ಪರಿಷ್ಕøತ ಚಾರ್ಟ್ ಪ್ರಕಾರ, ರೈತರಿಂದ ಸಂಗ್ರಹಿಸಿದ ಹಾಲಿಗೆ ಮಿಲ್ಮಾ ಸ್ವೀಕರಿಸುವ ಮಧ್ಯಂತರ ಮೊತ್ತದಲ್ಲಿ ಯಾವುದೇ ಹೆಚ್ಚಳವನ್ನು ಘೋಷಿಸಲಾಗಿಲ್ಲ. 2019 ರಲ್ಲಿ, ಗುಣಮಟ್ಟವನ್ನು ಅವಲಂಬಿಸಿ, ಪ್ರತಿ ಲೀಟರ್‍ಗೆ 1.70 ರಿಂದ 2.54 ರೂ.ಏರಿಕೆಮಾಡಲಾಗಿತ್ತು. ಹೆಚ್ಚಳದ 34 ಪೈಸೆ ಈ ಬಾರಿ ಹೈನುಗಾರರಿಗೆ ಸಿಗಲಿದೆ ಎಂದು ಘೋಷಿಸಲಾಗಿತ್ತು. ಪರಿಷ್ಕೃತ ಚಾರ್ಟ್ ಪ್ರಕಾರ ಹಾಲಿ ಹಾಲಿನ ದರಕ್ಕಿಂತ 26 ಪೈಸೆ ಮಾತ್ರ ಹೆಚ್ಚಳವಾಗಿದೆ.
         ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಿಸುವ ಬದಲು ಗುಣಮಟ್ಟದ ಆಧಾರದ ಮೇಲೆ ಹೆಚ್ಚಳ ಜಾರಿಗೊಳಿಸಲಾಗಿದೆ. ಇದರಿಂದಾಗಿ ಹೆಚ್ಚಳದ ಲಾಭ ಸಂಪೂರ್ಣವಾಗಿ ರೈತನಿಗೆ ದೊರಕುವುದಿಲ್ಲ. ಪ್ರತಿ ಲೀಟರ್ ಗೆ ಗರಿಷ್ಠ 62.66 ರೂ.ಗಳಿದ್ದರೂ ಈ ಮಾನದಂಡ ಅನುಸರಿಸುವ ರೈತರಿಲ್ಲ ಎನ್ನಬಹುದು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries