ನವದೆಹಲಿ:ವೈಯಕ್ತಿಕ ಡಾಟಾ ಸಂರಕ್ಷಣಾ ಮಸೂದೆಯ ಕರಡನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಡಾಟಾ ಸಂಸ್ಕರಣೆಗೆ ಕಟ್ಟುನಿಟ್ಟಾಗಿ ಬಳಕೆದಾರರ ಒಪ್ಪಿಗೆ ಪಡೆಯುವ ವ್ಯವಸ್ಥೆಯ ಚೌಕಟ್ಟನ್ನು ಒದಗಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟೆಕ್ ಸಂಸ್ಥೆಗಳಿಗೆ ರಿಯಾಯ್ತಿ ನೀಡುವ ನೆಟ್ ಕಂಪನಿಗಳಲ್ಲಿ ವೈಯಕ್ತಿಕ ಡಾಟಾ ಉಲ್ಲಂಘನೆಗೆ 500 ಕೋಟಿ ರೂ.
ದಂಡ ವಿಧಿಸುವ ಪ್ರಸ್ತಾವ ಇದರಲ್ಲಿ ಸೇರಿದೆ ಎಂದು timesofindia.com ವರದಿ ಮಾಡಿದೆ.
ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳಾದ ಗೂಗಲ್, ಅಮೆಝಾನ್ ಮತ್ತು ಮೆಟಾದಂಥ (Google, Amazon and Meta) ಕಂಪೆನಿಗಳು ಹೊಸ ಮಸೂದೆಯಿಂದ ಲಾಭ ಪಡೆಯುವ ನಿರೀಕ್ಷೆ ಇದ್ದು, ಇದು ಗಡಿಯಾಚೆಗೆ ಡಾಟಾ ವರ್ಗಾವಣೆ ಮಾಡಲು ಇರುವ ಕೆಲ ನಿರ್ದಿಷ್ಟ ನಿರ್ಬಂಧಗಳನ್ನು ಸಡಿಲಿಸಲಿದೆ.
ಆದರೆ ಬಳಕೆದಾರರ ಹಣಕಾಸು, ಆರೋಗ್ಯ ಮತ್ತು ಬಯೋಮೆಟ್ರಿಕ್ ಮಾಹಿತಿಯಂಥ "ಸೂಕ್ಷ್ಮ ವೈಯಕ್ತಿಕ ಡಾಟಾ" ಮಾಹಿತಿಯ ಮಿರರ್ ಪ್ರತಿಗಳನ್ನು ಭಾರತದಲ್ಲಿ ಇಡುವ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ. ಈ ಹಿಂದೆ ಆಗಸ್ಟ್ ನಲ್ಲಿ ಸರ್ಕಾರ ಕರಡು ಪ್ರತಿಯನ್ನು ರದ್ದುಪಡಿಸಿತ್ತು.
ಹಿಂದಿನ ಕರಡು ಮಸೂದೆಯಲ್ಲಿದ್ದ ಹಲವು ಅಂಶಗಳನ್ನು ಜಾಗತಿಕ ಟೆಕ್ ಕಂಪನಿಗಳು ವಿರೋಧಿಸಿದ್ದ ಹಿನ್ನೆಲೆಯಲ್ಲಿ, ಡಾಟಾ ವರ್ಗಾವಣೆ ಮೇಲೆ ನಿರ್ಬಂಧ ಹಾಗೂ ಭಾರತದಲ್ಲೇ ಅವುಗಳನ್ನು ಸಂಗ್ರಹಿಸಿ ಇಡುವ ಬಗೆಗಿನ ಅಂಶಗಳನ್ನು ಕೈಬಿಡಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.