ಆಲಪ್ಪುಳ: 50 ರ ಹರೆಯದ ಬಳಿಕ ಮಹಿಳೆಯರು ಶಬರಿಮಲೆ ಪ್ರವೇಶಿಸಿದರೆ ಸಾಕು ಎಂದು ಮಾಜಿ ಸಚಿವ ಜಿ ಸುಧಾಕರನ್ ಹೇಳಿದ್ದಾರೆ. ಜಗತ್ತಿನಲ್ಲಿ ತಿಳಿದಿರುವ ಮತ್ತು ತಿಳಿದಿಲ್ಲದ ವಿಷಯಗಳಿವೆ ಎಂದವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಜ್ಞಾತ ವಿಷಯಗಳಿರುವಲ್ಲಿಯ ವರೆಗೂ ಜ್ಯೋತಿಷ್ಯ ಪ್ರಸ್ತುತವಾಗಿರುತ್ತದೆ ಎಂದು ಅವರು ಹೇಳಿರುವÀರು. ಜ್ಯೋತಿಷ್ಯ ತಾಂತ್ರಿಕವೇದಿಕೆ ರಾಜ್ಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಬರಿಮಲೆಯಲ್ಲಿ ಧಾರ್ಮಿಕ ವಿಧಿವಿಧಾನ ಉಲ್ಲಂಘನೆಯಾದರೆ ಬಂದ್ ಮಾಡಲಾಗುವುದು ಎಂಬ ತಂತ್ರಿ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದವರು. ಯುವತಿಯರ ಶಬರಿಮಲೆ ಪ್ರವೇಶಿಸಿದ ನಂತರ ಶುದ್ಧೀಕರಣ ಮಾಡಿದ ತಂತ್ರಿ ಮನುಷ್ಯರೇ ಎಂದು ಸುಧಾಕರನ್ ಪ್ರಶ್ನಿಸಿದ್ದರು. ತಂತ್ರಿ ಬ್ರಾಹ್ಮಣರಲ್ಲ ಬ್ರಾಹ್ಮಣ ರಾಕ್ಷಸ, ತಂತ್ರಿಗಳಿಗೆ ಅಯ್ಯಪ್ಪನ ಮೇಲೆ ಪ್ರೀತಿ ಇಲ್ಲ ಎಂದು ಜಿ.ಸುಧಾಕರನ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಶಬರಿಮಲೆಯಿಂದ ತಂತ್ರಿ ಸ್ಥಳಾಂತರಕ್ಕೆ ಒತ್ತಾಯ ಕೂಡಾ ಮಾಡಿದ್ದರು.
ಆದರೆ ನಿನ್ನೆ ತಮ್ಮ ನಿಲುವನ್ನು ಬದಲಿಸಿ 50 ರ ಹರೆಯ ದಾಟಿದ ಮಹಿಳೆಯರು ಶಬರಿಮಲೆ ಏರಿದರೆ ಸಾಕು ಎಂದು ಜಿ ಸುಧಾಕರನ್ ಹೇಳಿದ್ದು ರಾಜಕೀಯ ವ್ಯಕ್ತಿಗಳ ನೈಜ ಸ್ವರೂಪದ ನವೀನ ಮಾದರಿಯಾಗಿ ಅಚ್ಚರಿಮೂಡಿಸಿದೆ.
ಯಾವ ಜ್ಯೋತಿಷಿಯೂ ಕೊಲೆ ಮಾಡಿಲ್ಲ. ಇದನ್ನು ಒಬ್ಬ ರಾಜಕಾರಣಿ ನಡೆಸುತ್ತಿದ್ದಾರೆ. ಕೇರಳದಲ್ಲಿ ರಾಜಕಾರಣಿಗಳ ವೇಷ ಧರಿಸುವ ಇಂಥವರು ಹೆಚ್ಚಾಗುತ್ತಿದ್ದಾರೆ. ರಾಜಕೀಯ ಒಂದು ಕಲೆ. ತನಗೆ ಅರಿವಿಲ್ಲದೇ ಎμÉ್ಟೂೀ ಜನ ಬೆಳಗಿನ ಜಾವ ಬಿಳಿ ಅಂಗಿ, ಶರ್ಟು ಹಾಕಿಕೊಂಡು ಸೆಂಟ್ ಪೂಸಿ ಬರುತ್ತಿದ್ದಾರೆ. ದೂರವಾಣಿ ಕರೆಗಳ ಮೂಲಕ ರಾಜಕೀಯ ಕೆಲಸ ಮಾಡುತ್ತಾರೆ.
ಕೇರಳದಲ್ಲಿ ಕಾಂಗ್ರೆಸ್ಸಿಗರು ಮತ್ತು ಕಮ್ಯುನಿಸ್ಟರನ್ನು ಗುರುತಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರಿಂದ ಜನರು ನಿರೀಕ್ಷಿಸುತ್ತಿರುವುದು ಸಿಗುತ್ತಿಲ್ಲ ಎಂದು ಮಾಜಿ ಸಚಿವರು ಈ ಸಂದರ್ಭ ಹೇಳಿದರು.
ಬಣ್ಣ ಬದಲಿಸಿದ ಮಾಜಿ ಎಡ ಸಚಿವ: 50 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಶಬರಿಮಲೆ ದರ್ಶನಗೈದರೆ ಸಾಕು: ಜಿ.ಸುಧಾಕರನ್ ಹೇಳಿಕೆ
0
ನವೆಂಬರ್ 14, 2022