ಪಂದಳಂ: ಶಬರಿಮಲೆಯ ಆದಾಯದಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳದೊಂದಿಗೆ ಭಾರೀ ಏರಿಕೆಯಾಗಿದೆ. ಮೊದಲ ಹತ್ತು ದಿನಗಳಲ್ಲಿ ಶಬರಿಮಲೆಗೆ ಅಸಂಖ್ಯ ಭಕ್ತರು ಭೇಟಿ ನೀಡಿದ್ದು, ಆದಾಯ 52 ಕೋಟಿ ದಾಟಿದೆ.
ಅರವಣ ಮಾರಾಟದಿಂದ ಅತ್ಯಧಿಕ ಆದಾಯ ದೊರೆತಿದೆ. ದೇವಾಲಯಕ್ಕೆ ಪ್ರವಾಹದೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ನ್ಯಾಯವಾದಿ. ಕೆ. ಅನಂತ ಗೋಪನ್ ಈ ಬಗ್ಗೆ ಮಾಹಿತಿ ನೀಡಿದರು.
ದೇವಾಲಯದ ಒಟ್ಟು ಆದಾಯ 52.55 ಕೋಟಿ ರೂ.ದಾಟಿದೆ. ಅರವಣ ಪ್ರಸಾದದಿಂದ 23.57 ಕೋಟಿ ರೂ. ಆದಾಯ ಬಂದಿದೆ. ಅಪ್ಪಂ ನಿಂದ 2.58 ಕೋಟಿ ಮತ್ತು ಇತರ ಕಾಣಿಕೆಗಳಿಂದ 12.73 ಕೋಟಿ ರೂ.ಆದಾಯ ಗಳಿಸಲಾಗಿದೆ. ಕೊಠಡಿ ಬಾಡಿಗೆಯಿಂದ 48.84 ಲಕ್ಷ ಮತ್ತು ಅಭಿμÉೀಕ ಸೇವೆಯಿಂದ 31.87 ಲಕ್ಷ ರೂ.ಆದಾಯ ಬಂದಿದೆ.
ಕಳೆದ ವರ್ಷ ಕೋವಿಡ್ ನಿಯಂತ್ರಣದಿಂದ ಸನ್ನಿಧಿಗೆ ಕಡಿಮೆ ಸಂಖ್ಯೆಯ ಯಾತ್ರಿಗಳು ಆಗಮಿಸಿದ್ದರು. ಕಳೆದ ವರ್ಷ ದೇವಸ್ಥಾನದ ಒಟ್ಟು ಆದಾಯ 9.92 ಕೋಟಿ ರೂ. ಮಾತ್ರವಾಗಿತ್ತು.
ಈ ವರ್ಷದ ಆದಾಯದ ಹೆಚ್ಚಿನ ಭಾಗವನ್ನು ಉತ್ಸವದ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಅಪ್ಪಂ ಮತ್ತು ಅರವಣ ಪ್ರಸಾದದ ದಾಸ್ತಾನು ಇದ್ದು, ನಿತ್ಯ ಎರಡೂವರೆ ಲಕ್ಷ ಅರವಣ ಮಾರಾಟವಾಗುತ್ತಿದೆ ಎಂದು ತಿಳಿಸಿದರು.
ಮೊದಲ ಹತ್ತು ದಿನಗಳಲ್ಲಿ 52 ಕೋಟಿ ದಾಟಿದ ಶಬರಿಮಲೆ ಆದಾಯ: ಅತ್ಯಧಿಕ ಆದಾಯ ಅರವಣ ಮಾರಾಟದಿಂದ
0
ನವೆಂಬರ್ 28, 2022