ಕಾಸರಗೋಡು: ಎಣ್ಮಕಜೆ ಮತ್ತು ಪುಲೂರು ಗ್ರಾಮಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸಾಯಿ ಟ್ರಸ್ಟ್‍ನಿಂದ ನಿರ್ಮಾಣ ಪೂರ್ಣಗೊಂಡಿರುವ 55ಮನೆಗಳ ಕೀಲಿಕೈ ಹಸ್ತಾಂತರ ಕಾರ್ಯ ಶೀಘ್ರ ನಡೆಯಲಿರುವುದಾಗಿ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಡಾ.ಆರ್. ಬಿಂದು ತಿಳಿಸಿದ್ದಾರೆ.
ಎಂಡೋಸಲ್ಫಾನ್ ವಲಯದ ಪುನರ್ವಸತಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ನಡೆದ ಕಾಮಗಾರಿಗಳ ಅವಲೋಕನಾ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಸಕ್ತ ಇರುವ ಕಾಮಗಾರಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಯಿತು. ಕುಡಿಯುವ ನೀರು, ವಿದ್ಯುತ್ ಪೂರೈಕೆ, ರಸ್ತೆಗಳ ನಿರ್ಮಾಣಕಾರ್ಯ ಅಂತಿಮ ಹಂತದಲ್ಲಿದೆ. ಎಂಡೋಸಲ್ಫಾನ್ ಪ್ರದೇಶದಲ್ಲಿ ಬಡ್ಸ್ ಶಾಲೆಗಳನ್ನು ತಕ್ಷಣವೇ ಸ್ಥಾಪಿಸಲು ಕೇರಳ ಸಮಾಜ ಕಲ್ಯಾಣ ಮಿಷನ್ ಮತ್ತು ಕುಟುಂಬಶ್ರೀ ಮಿಷನ್‍ಗೆ ಹೊಣೆಗಾರಿಕೆ ವಹಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬೋವಿಕ್ಕಾನದ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಮೊದಲ ಹಂತದ ಮನೆಗಳ ನಿರ್ಮಾಣವು ಮೇ 2023 ರೊಳಗೆ ಪೂರ್ಣಗೊಳ್ಳಲಿದೆ. ಕ್ಲಿನಿಕಲ್ ಸೈಕಾಲಜಿ, ಹೈಡ್ರೋಥೆರಪಿ ಮತ್ತು ಕೌನ್ಸೆಲಿಂಗ್ ಬ್ಲಾಕ್‍ನ ನಿರ್ಮಾಣವನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಲಾಗುವುದು. ಎರಡನೆ ಹಂತಕ್ಕೆ ಯಾವ ಘಟಕಗಳು ಬೇಕು ಎಂಬ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಚಿವೆ ಆರ್.ಬಿಂದು ತಿಳಿಸಿದರು.
ಎಂಡೋಸಲ್ಫಾನ್ ಪುನರ್ವಸತಿ: 55 ಮನೆಗಳ ಕೀಲಿಕೈ ಹಸ್ತಾಂತರ ಶೀಘ್ರ
0
ನವೆಂಬರ್ 14, 2022
Tags