ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾ ಯಾಗ ಹಾಗೂ ಶ್ರೀ ಚಕ್ರಪೂಜೆ ಡಿಸೆಂಬರ್ 5ರಿಂದ 8ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತñತ್ವದಲ್ಲಿ ಯಾಗ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ನ.28 ರಂದು ಬೆಳಿಗ್ಗೆ 9.24ಕ್ಕೆ ಚಪ್ಪರ ಮುಹೂರ್ತ ನಡೆಯಲಿದೆ. ಡಿ.4ರಂದು ಸಂಜೆ 4ಕ್ಕೆ ಐಲ ಕ್ಷೇತ್ರದ ಮಹಾದ್ವಾರದಿಂದ ಹೊರೆಕಾಣಿಕೆ ಮೆರವಣಿಗೆ, 5ರಂದು ಬೆಳಿಗ್ಗೆ 8ಕ್ಕೆ ತೋರಣ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ಮಂಟಪ ನಮಸ್ಕಾರ, ಆಚಾರ್ಯವರಣ, ಯಾಗಕುಂಡ ಶುದ್ದಿ ಸಹಿತ ವಿವಿಧ ವೈಧಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 6.30ರಿಂದ ಜ್ಯೋತಿ ಲಕ್ಷ್ಮಿ ಅಮೈ ಬಾಯಾರು ಇವರ ಶಿಷ್ಯೆಯರಾದ ಕು.ಗಾಯತ್ರಿ, ಕು.ಶ್ರಾವಣ್ಯ ಕೊಂಡೆವೂರು ಇವರಿಂದ ವಯಲಿನ್ ವಾದನ ನಡೆಯಲಿದೆ. ಖ.6ರಂದು ಬೆಳಿಗ್ಗೆ 5.30ಕ್ಕೆ ಗಣಹೋಮ, ಸಪ್ತಶÀತೀ ಪಾರಾಯಣ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ರಿಂದ ಸ್ವಾಮೀಜಿಯವರಿಗೆ ಪೂರ್ಣ ಕುಂಭ ಸ್ವಾಗತ, 4.15ರಿಂದ ಧಾರ್ಮಿಕ ಸಭೆ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಉಪಸ್ಥಿತರಿರುವರು. ಯಾಗ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಕುಸುಮೋದರ ಶೆಟ್ಟಿ ಮುಂಬಯಿ, ಸಂಜೀವ ಶೆಟ್ಟಿ ತಿಂಬರ ಮುಂಬಯಿ, ಗಿರೀಶ್ ರಾವ್ ನಿಧಿಮುಂಡ ಬೆಂಗಳೂರು, ಭುಜಂಗ ಶೆಟ್ಟಿ ಕೊಂಡೆವೂರು, ಮುಂಬಯಿ, ಶಶಿಧರ ಶೆಟ್ಟಿ ಗ್ರಾಮಚಾವಡಿ ಮುಟ್ಟ, ಕೆ.ಕೆ ಶೆಟ್ಟಿ ಅಹಮದ್ ನಗರ, ಧನ್ ರಾಜ್ ಎಸ್.ಎಂ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬೆಂಗಳೂರು ಸುವರ್ಣ ನ್ಯೂಸ್ ಚಾನೆಲ್‍ನ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬಾರು, ರೂಪೇಶ್ ಶೆಟ್ಟಿ ತಿಂಬರ ಇವರನ್ನು ಸನ್ಮಾನಿಸಲಾಗುವುದು. ಸಂಜೆ 5ರಿಂದ ದುರ್ಗಾ ನಮಸ್ಕಾರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 7ರಿಂದ ವಿಜಯಕುಮಾರ್ ಕೋಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಕಲಾಸಂಗಮ ಮಂಗಳೂರು ಅಭಿನಯಿಸುವ ‘ಶಿವದೂತೆ ಗುಳಿಗೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 7ರಂದು ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ ಸಹಿತ ವಿವಿಧ ವೈಧಿಕ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ನವಾವರಣ ಕೀರ್ತನೆಯೊಂದಿಗೆ ಶ್ರೀ ಚಕ್ರಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 8ರಂದು ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮ, ಅನುಷ್ಠಾನ ಸಂಕಲ್ಪ, ಅಗ್ನಿಜನನದೊಂದಿಗೆ ಶತಚಂಡಿಕಾ ಯಾಗ ಪ್ರಾರಂಭ, 11.30ಕ್ಕೆ ಪೂರ್ಣಾಹುತಿ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಐಲ ಕ್ಷೇತ್ರದಲ್ಲಿ ಶತಚಂಡಿಕಾ ಯಾಗ ಹಾಗೂ ಶ್ರೀ ಚಕ್ರಪೂಜೆ ಡಿ.5ರಿಂದ
0
ನವೆಂಬರ್ 03, 2022
Tags