ನವದೆಹಲಿ: ನೋಟು ಅಮಾನ್ಯೀಕರಣವನ್ನು 'ಆರ್ಥಿಕ ನರಮೇಧ' ಮತ್ತು 'ಅಪರಾಧ ಕೃತ್ಯ' ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, 2016 ರಲ್ಲಿ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ 1,000 ಮತ್ತು 500 ರೂಪಾಯಿಗಳ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿದರು.
ಭಯೋತ್ಪಾದಕ ನಿಧಿಯನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಕಪ್ಪುಹಣವನ್ನು ತಡೆಯುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶಗಳಾಗಿವೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಮತ್ತು ರಾಜ್ಯಸಭೆಯಲ್ಲಿ ಪಕ್ಷದ ನಾಯಕ ಡೆರೆಕ್ ಒ'ಬ್ರಿಯಾನ್, ನೋಟು ಅಮಾನ್ಯೀಕರಣ ಮಾಡಿದ ಈ ಕ್ರಮವು 'ಗಿಮಿಕ್' ಆಗಿದೆ. 6 ವರ್ಷಗಳ ಹಿಂದೆ, ಇದೇ ದಿನ ಆರ್ಥಿಕ ನರಮೇಧವಾಗಿ ಹೊರಹೊಮ್ಮಿದ ದಿನ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದರು. ಈ ನಿರ್ಧಾರವನ್ನು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಮೊದಲಿಗೆ ಮಮತಾ ಬ್ಯಾನರ್ಜಿ ಅವರು 'ಈ ಕಠಿಣ ನಿರ್ಧಾರವನ್ನು ಹಿಂತೆಗೆದುಕೊಳ್ಳಿ' ಎಂದು ಹೇಳಿದರು. ಆದರೆ, ಕೆಲವು ವಾರಗಳ ನಂತರವೇ ಇತರರು ಇದನ್ನು ಒಪ್ಪಿದರು' ಎಂದು ಬ್ರಿಯಾನ್ ಗಮನಸೆಳೆದರು.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, 'ಎಲ್ಲಾ ಉತ್ತಮ ಪ್ರಜ್ಞೆ, ಪುರಾವೆಗಳು ಮತ್ತು ಸಲಹೆಗಳಿಗೆ ವಿರುದ್ಧವಾಗಿ ನೋಟು ಅಮಾನ್ಯೀಕರಣದ ಕ್ರಿಮಿನಲ್ ಕೃತ್ಯದ ಮೇಲೆ ಸರ್ಕಾರವು ತನ್ನದೇ ಆದ ಡ್ರಮ್ ಅನ್ನು ಹೊಡೆಯುತ್ತಿದೆ' ಎಂದು ಆರೋಪಿಸಿದ್ದಾರೆ.
ಇದು ಭಾರತದ ಆರ್ಥಿಕತೆಯನ್ನು ಕೊಂದು ಹಾಕಿದ ಮೋದಿ ಮತ್ತು ಅವರ ಸರ್ಕಾರದ ಸೊಕ್ಕಿನ ಆರನೇ ವಾರ್ಷಿಕೋತ್ಸವ. ನೋಟು ಅಮಾನ್ಯೀಕರಣವು ಚಲಾವಣೆಯಲ್ಲಿರುವ ದಾಖಲೆಯ 30.88 ಲಕ್ಷ ಕೋಟಿ! ನಗದು ಸೇರಿದಂತೆ ಅವ್ಯವಸ್ಥೆಗೆ ಕಾರಣವಾಗಿದೆ. ಇದೊಂದು ಎಲ್ಲಕ್ಕಿಂತಲೂ ಕೆಟ್ಟ ಸುಳ್ಳು - 'ಈ ಸಂಕಟ ಕೇವಲ 50 ದಿನಗಳು' ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಹಿರಿಯ ನಾಯಕ ಬಿನೋಯ್ ವಿಶ್ವಂ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 'ಆರು ವರ್ಷಗಳ ಹಿಂದೆ, ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ಕ್ರಮವನ್ನು ಬಹಳ ಸಂಭ್ರಮದಿಂದ ತೆಗೆದುಕೊಳ್ಳಲಾಯಿತು. ಕಪ್ಪುಹಣ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಭರವಸೆಯನ್ನು ನೀಡಲಾಯಿತು. ಇದು ದೇಶಕ್ಕೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ಪರಿಶೀಲಿಸುವ ಸಮಯ ಇದೀಗ ಬಂದಿದೆ' ಎಂದು ಹೇಳಿದ್ದಾರೆ.
ಅಂದು ನೀಡಿದ್ದ ಭರವಸೆಗಳ ಮೌಲ್ಯಮಾಪನ ಮಾಡುವ ಸಮಯ ಬಂದಿದೆ. ನೋಟು ಅಮಾನ್ಯೀಕರಣದ ಬಗ್ಗೆ ಶ್ವೇತಪತ್ರ ಮಂಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿನಂತಿಸಲಾಗಿದೆ' ಎಂದು ತಿಳಿಸಿದ್ದಾರೆ.